ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆತಿಥೇಯರಿಗೆ ಸಿಐಟಿ ಟ್ವೆಂಟಿ ಕಪ್

Rashmi Kasaragodu
Updated On : 6 Mar 2013, 12:36 pm

ಕನ್ನಡಪ್ರಭ ವಾರ್ತೆ  ರಾಮನಗರ  ಮಾ.5
ಇದೇ ಮೊದಲ ಬಾರಿಗೆ ಅತಿಥೇಯ ಗುಬ್ಬಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯಕ್ಕೆ 2013 ನೇ ಟ್ವೆಂಟಿ ಟ್ವೆಂಟಿ ಕಪ್ ಲಭಿಸಿದೆ.
ಕಳೆದ 12 ವರ್ಷಗಳಿಂದ ಗುಬ್ಬಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯಲ್ಲಿ ಸಿಐಟಿ ಕಪ್ 20-20 ಕ್ರಿಕೆಟ್ ಆಯೋಜಸುತ್ತಿದೆ. ಅಂತಿಮ ಪಂದ್ಯದಲ್ಲಿ ಸಿಐಟಿ ತಂಡವು ದಾವಣಗೆರೆ ತಂಡದೊಂದಿಗೆ ಸೆಣಸಿ ಜಯ ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ ಸಿಐಟಿ ತಂಡ 193 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ದಾವಣಗೆರೆ ತಂಡ ಕೇವಲ 101 ರನ್ನುಗಳನ್ನು ಗಳಿಸಲು ಸಾಧ್ಯವಾಯಿತು. ಕಾಲೇಜಿನ ನಿರ್ದೇಶಕ  ಡಾ. ಸುರೇಶ್ ಕುಮಾರ್ ಡಿ.ಎಸ್. ಅವರು ಜಯಶಾಲಿಯಾದ ತಂಡದವರನ್ನು ಅಭಿನಂದಿಸಿ ಬಹುಮಾನ ವಿತರಿಸಿದರು. ಸಿಐಟಿ ತಂಡದ ನಾಯಕ ಟಿ.ಎಸ್. ಸಂದೀಪ್ ತಂಡದ ಆಟಗಾರರೊಡನೆ ಬಹುಮಾನವನ್ನು ಸ್ವೀಕರಿಸಿದರು.
118 ರನ್ನುಗಳನ್ನು ಗಳಿಸುವ ಮೂಲಕ ಪಂದ್ಯ ಪುರುಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಸಿಐಟಿಯ ಹರ್ಷವರ್ಧನ್ ಮತ್ತು ಮಲ್ಲಿಕಾರ್ಜುನ್ ಅನುಕ್ರಮವಾಗಿ ಪಂದ್ಯ ಶ್ರೇಷ್ಠ ಹಾಗು ಅತಿ ಹೆಚ್ಚು ವಿಕೆಟ್ ತೆಗೆದುಕೊಂಡ ಪ್ರಶಸ್ತಿಗಳನ್ನು ಪಡೆದುಕೊಂಡರು. ಪ್ರಾಂಶುಪಾಲ ಡಾ.ವಿ. ವೆಂಕಟೇಶ್, ಉಪಪ್ರಾಂಶುಪಾಲ ಪ್ರೊ.ಶಾಂತಲಾ ಸುರೇಶ್, ದೈಹಿಕ ಶಿಕ್ಷಣ ನಿರ್ದೇಶಕ ಜಿ. ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement