ಕೆಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ
ಕ.ಪ್ರ. ವಾರ್ತೆ, ವಿಜಯಪುರ ಮಾ. 5: ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ 5 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ಪಕ್ಷದ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮತ್ತು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ. ನಟರಾಜ್ ಮತಯಾಚನೆ ಮಾಡಿದರು. ಮಾತನಾಡಿದ ಶ್ರೀನಿವಾಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆಯಲ್ಲಿ ನೀಡಿರುವ ಅನುದಾನ, ಸಂಧ್ಯಾ ಸುರಕ್ಷ ಯೋಜನೆ, ಮಾಸಾಶನ, ಸೈಕಲ್ ವಿತರಣೆ ಹಾಗೂ ವಿಜಯಪುರ ಪುರಸಭೆಗೆ ನೀಡಿರುವ 30ಕೋಟಿ ಅನುದಾನವನ್ನು ಸದುಪಯೋಗಪಡಿಸಿಕೊಂಡು ಕೆಲಸ ಮಾಡಿಲ್ಲದಿರುವುದು ಕಂಡು ಬಂದಿದೆ ಎಂದರು.