ಕೆಜೆಪಿ ಪರ ಮಹೇಶಯ್ಯ ಮತಯಾಚನೆ
ಮಾಗಡಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕೊಟ್ಟಂತಹ ಮಹತ್ವಕಾಂಕ್ಷೆಯ ಯೋಜನೆ, ಸಾಧನೆಯನ್ನು ಮತದಾರರ ಗಮನಕ್ಕೆ ತನ್ನಿ. ಆ ಮೂಲಕ ಕೆಜೆಪಿಗೆ ಮತ ನೀಡಿ ಎಂದು ಕೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಹೇಶಯ್ಯ ತಿಳಿಸಿದರು.
ಅವರು ಮಾಗಡಿ ಪಟ್ಟಣದ 21ನೇ ವಾರ್ಡ್‌ನಲ್ಲಿ ಕೆಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ ಪರ ಮತಯಾಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಾರಿ ಪ್ರಥಮವಾಗಿ ಬಿಎಸ್‌ವೈ ಅವರ ಕೆಜೆಪಿ ಪಕ್ಷದಿಂದ ಸ್ಥಳೀಯ ಸಂಸ್ಥೆಯಗಳ ಚುನಾವಣೆಗೆ ಸ್ಪರ್ಧಿಸಿದ್ದು, ಅವರು ಕೊಟ್ಟಂತಹ ಯೋಜನೆಗಳು ಪ್ರತಿಯೊಬ್ಬರ ಮನೆಗೂ ತಲುಪಿದ್ದೇವೆ. ಅವರ ಮುಂದಾಲೋಚನೆ ನಿಜಕ್ಕೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದು, ಜನತ ಕೆಜೆಪಿಗೆ ಹೆಚ್ಚು ಒಲವು ತೋರಿದ್ದಾರೆ. ಮಾಗಡಿ ಪುರಸಭೆಗೆ ಕೆಜೆಪಿಯಿಂದ 7 ಮಂದಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಕನಿಷ್ಠ ಮೂರ ಮಂದಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಮನಸ್ಸು ಮಾಡಿ ಕೆಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. 21ನೇ ವಾರ್ಡ್ ಕೆಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ ಮಾತನಾಡಿ ಮತದಾರರು ಹೆಚ್ಚು ಮತ ನೀಡುವ ಮೂಲಕ ನನ್ನನ್ನು ಪುರಸಭೆ ಆಯ್ಕೆ ಮಾಡಿದರೆ ಸರ್ಕಾರದ ಯೋಜನೆಗಳನ್ನು ಬಡವರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.ಜನಪರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇನೆ. ಮತದಾರರ ಆಶೀರ್ವಾದದಿಂದ ಜನರ ಸೇವೆಗೆ ಸದಾ ಬದ್ಧನಾಗಿರುತ್ತೇನೆ ಎಂದರು. ಯಶೋದಮ್ಮ, ಟಿ.ಆರ್.ರಮೇಶ್, ಪ್ರಕಾಶ್, ಮೂರ್ತಿ, ಚಿಕ್ಕಣ ಇದ್ದರು.