ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್‌ಗೆ ಬಹುಮತ ನೀಡಿ

Rashmi Kasaragodu
Updated On : 6 Mar 2013, 12:35 pm

ವಿಜಯಪುರ: ಪಟ್ಟಣದ 2ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದು, ಕಣದಲ್ಲಿರುವ ಇತರೆ ಜೆಡಿಎಸ್ ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಆಶಿಸಿದರು.  ಪಟ್ಟಣದ ಓಂಕಾರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ  ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತದಾರರು ಜೆಡಿಎಸ್‌ಗೆ ಮತ್ತೆ ಗೆಲವಿನ ಸಿಹಿ ಉಣಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.  ಪುರಸಭಾ ಮಾಜಿ ಅಧ್ಯಕ್ಷ ಚಿನ್ನಯ್ಯ, ಜೆ.ಆರ್. ಮುನಿವೀರಣ, ರಾಧಮ್ಮ,ಪ್ರಕಾಶ್,ಎಚ್.ಎಂ.ಕೃಷಪ್ಪ, ಎಂ.ಮಂಜುನಾಥ್, ಅಬ್ದುಲ್ ಕರೀಂ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement