ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಜೆಪಿ ಪರ ಜನಾರ್ದನಸ್ವಾಮಿ ಬಿರುಸಿನ ಪ್ರಚಾರ

Rashmi Kasaragodu
Updated On : 6 Mar 2013, 12:37 pm

ಪಾವಗಡ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯ ಜನಾರ್ದನಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಶಿವಪ್ರಸಾದ್, ತಾಲೂಕು ಅಧ್ಯಕ್ಷ ಸೋಮ್ಲಾ ನಾಯ್ಕ್ ಮುಂತಾದವರು ಪಟ್ಟಣಕ್ಕೆ ಭೇಟಿ ನೀಡಿ ಪಟ್ಟಣದಲ್ಲಿ ರೋಡ್ ಶೋ ನಡೆಸಿ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಪ್ರಾರಂಭದಲ್ಲಿ ಪಟ್ಟಣದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಬಳ್ಳಾರಿ ರಸ್ತೆಯ ಮೂಲಕ ರೋಡ್ ಶೋ ನಡೆಸಿ ವಾರ್ಡ್‌ನಂ 3, ಅಪ್‌ಬಂಡೆಗೆ ಭೇಟಿ ನೀಡಿ ಎಸ್ಸಿ ಮೀಸಲು ಅಭ್ಯರ್ಥಿ ಕಡಪಲಕೆರೆ ಪಿ.ಹನುಮಂತರಾಯಪ್ಪ ಪರ ಮತಯಾಚಿಸಿದರು.
ನಂತರ ಪತಂಜಲಿ ನಗರ, ಬ್ರಾಹ್ಮಣರ ಬೀದಿ, ಶಾಂತಿ ನಗರ, ರೈನ್‌ಗೆಜ್ ಗುಟ್ಟಹಳ್ಳಿ, ಬನಶಂಕರಿ ವಿನಾಯಕನಗರ ಮುಂತಾದ ವಾರ್ಡ್‌ಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿಗಳ ಪರ ಮನೆಮನೆಗಳಲ್ಲಿ ಮತಯಾಚಿಸಿದರು. ಇದೇ ಸಂದರ್ಭದಲ್ಲಿ ಸಂಸದ ಜನಾರ್ದನಸ್ವಾಮಿ ಬಿಜೆಪಿ ಸರ್ಕಾರ ತಾಲೂಕಿಗೆ ನೀಡಿದ ಕೋಟ್ಯಂತರ ಅನುದಾನ ಪ್ರಗತಿ ಕಾಮಗಾರಿಗಳ ಬಗ್ಗೆ ಮತದಾರರಿಗೆ ವಿವರಿಸಿ ನ್ಯಾಯ ಸಮ್ಮತ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
 ಜಿಲ್ಲಾಧ್ಯಕ್ಷ ಎಸ್. ಶಿವಪ್ರಸಾದ್ ಮಾತನಾಡಿ ಬಿಜೆಪಿ ಸರ್ಕಾರ ಪಟ್ಟಣ ಅಭಿವೃದ್ಧಿಗೆ ಸುಮಾರು 30ಕೋಟಿ ಅನುದಾನ ನೀಡಲಾಗಿದೆ ಎಂದರು.
 ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದಿಂದ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸೋಮ್ಲಾನಾಯ್ಕ್, ರಾಜ್ಯ ಪರೀಷತ್ ಸದಸ್ಯ
ಅಂಜನರೆಡ್ಡಿ, ಜಿ.ಟಿ.ಗಿರೀಶ್, ಎಂ.ಎಸ್. ವಿಶ್ವನಾಥ್, ಪುರಷೋತ್ತಮ ರೆಡ್ಡಿ, ಕೆ.ಎಂ ಪ್ರಭಾಕರ್, ವಿಜ್ಞಾನಿ ವೆಂಕಟಸ್ವಾಮಿ ಯುವ ಮುಖಂಡ ರವಿ ಪಿ. ಹನುಮಂತರಾಯಪ್ಪ ಸೇರಿದಂತೆ ನೂರಾರು ಮಂದಿ ಮುಖಂಡರು ಕಾರ್ಯಕರ್ತರು ರೋಡ್ ಶೋನಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement