ಶಿವರಾತ್ರಿ ಶಟಲ್ ಬ್ಯಾಡ್ಮಿಟನ್
ಕ.ಪ್ರ. ವಾರ್ತೆ, ತುರುವೇಕೆರೆ, ಮಾ,5. ಪಟ್ಟಣದ ಎನ್.ಬಿ.ಸಿ ಹೆಲ್ತ್ ಕೇರ್ ಕ್ಲಬ್ನ ಆಶ್ರಯದಲ್ಲಿ ಮಾ. 10 ರ ಭಾನುವಾರ ರಾತ್ರಿ ಮಹಾಶಿವರಾತ್ರಿ ಪ್ರಯುಕ್ತ ದೇವೇಗೌಡ ಬಡಾವಣೆಯಲ್ಲಿ 4 ನೇ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಟನ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ಹಾಗೂ 4ನೇ ಬಹುಮಾನ 1 ಸಾವಿರ ರುಗಳು. ಸ್ಪರ್ಧೆಗೆ ಬರುವವರು ಮಾ 9 ರಂದು ಸಂಜೆ 4 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಸಂಪರ್ಕಿಸಿ- ಈಶ್ವರ್ 9341896535.