ಗುಂಪು ಘರ್ಷಣೆ ವಿಷಾದನೀಯ
ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಾರ್ಡ್ ನಂ.31ರಲ್ಲಿ ನಡೆದಿರುವ ಗುಂಪು ಘರ್ಷಣೆ ವಿಷಾದನೀಯ. ತಪ್ಪಿತಸ್ಥರ ವಿರುದ್ಧ ್ಚಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಂತಿಯುತ ಮತದಾನ ನಡೆಯಲು ಅನುವು ಮಾಡಿಕೊಡಬೇಕು ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಬೇಕು. ತಾಲೂಕಿನ ರಾಜಕೀಯ ರಂಗಕ್ಕೆ ಹೊರಗಿನ ವ್ಯಕ್ತಿಗಳು ಕಾಲಿಟ್ಟಿರುವ ಹಿನ್ನಲೆಯಲ್ಲೇ ಈ ರೀತಿಯ ಪ್ರಕರಣಗಳು ಶುರುವಾಗಿವೆ. ಮತದಾರರು ಹೊರಗಿನ ವ್ಯಕ್ತಿಗಳಿಗೆ ಮನ್ನಣೆ ನೀಡದೆ ಶಾಂತಿ ಸುವ್ಯವಸ್ಥೆ ಕಾಪಾಡುವ ವ್ಯಕ್ತಿಗಳಿಗೆ ಮನ್ನಣೆ ನೀಡಬೇಕು. ಮಹಿಳೆಯರು ಮತಯಾಚನೆ ಮಾಡುವ ವೇಳೆ ಪುರುಷರು ಗಲಭೆ ನಡೆಸಿದ್ದು ಖಂಡನೀಯ ಎಂದಿದ್ದಾರೆ.