ಡಿಕೆಶಿ ನೀತಿ ಸಂಹಿತೆ ಉಲ್ಲಂಘನೆ: ಆರೋಪ
ಕನಕಪುರ: ಚುನಾವಣಾ ನೀತಿಸಂಹಿತೆ ಉಲ್ಲಂಘನೆಗಾಗಿ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ಚುನಾವಣಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ ನಿನ್ನೆ ರಾತ್ರಿ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಪಟ್ಟಣವ್ಯಾಪ್ತಿಯ 9ನೇ ವಾರ್ಡ್‌ನಲ್ಲಿ ಮನೆಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ವಿಚಾರವನ್ನು ತಿಳಿದ ತಹಸೀಲ್ದಾರ್ ಡಾ.ದಾಕ್ಷಾಯಣಿ ಹಾಗೂ ಪೊಲೀಸ್ ಉಪ ಆಧೀಕ್ಷಕ ಶಂತನುಸಿನ್ಹಾ ಸ್ಥಳಕ್ಕೆ ತೆರಳಿ ಶಾಸಕರಿಗೆ ಚುನಾವಣಾ ಪ್ರಚಾರ ನಡೆಸುವುದು ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ, ತಾವು ಪಟ್ಟಣ ವ್ಯಾಪ್ತಿಯನ್ನು ಬಿಟ್ಟು ತೆರಳಬೇಕು ಎಂದು ಹೇಳಿ ನೀತಿಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ನೊಟೀಸ್‌ಜಾರಿಗೊಳಿಸಿದ್ದಾರೆ. ಘಟನೆಯ ನಂತರ ಶಾಸಕರು ಪಟ್ಟಣವನ್ನು ಬಿಟ್ಟು ಬೆಂಗಳೂರಿಗೆ ತೆರಳಿದರು.