ಧೈರ್ಯದಿಂದ ಮತ ಚಲಾಯಿಸಿ
ಕ.ಪ್ರ. ವಾರ್ತೆ ಟಿ ನೆಲಮಂಗಲ ಟಿ ಮಾ.6
ಪುರಸಭೆಯ ಚುನಾವಣೆ ಪಟ್ಟಣದಲ್ಲಿ ಶಾಂತಿಯುತವಾಗಿ ನಡೆಯುತ್ತದೆ. ಯಾವುದೇ ರೀತಿಯ ಗೊಂದಲವಾಗಲಿ, ಅನುಮಾನಗಳಾಗಲಿ ಬೇಡ ಎಂದು ಪೊಲೀಸರು ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಶಾಂತಿಗೆ ಭಂಗ ತರುವಂತಹ ಘಟನೆಗಳು ನಡೆಯುವ ಸಂಚು ಮತ್ತು ಅನುಮಾನದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಇದಕ್ಕೆ ಜನ ಸ್ಪಂದಿಸಬೇಕು ಎಂದು ಡಿ.ವೈ.ಎಸ್ಪಿ ಮಲ್ಲೇಶ್ ಜನರಲ್ಲಿ ಮನವಿ ಮಾಡಿದರು. ೆ ಪಟ್ಟಣದ ಪೊಲೀಸ್ ಠಾಣೆಯಿಂದ ಡಿ.ವೈ.ಎಸ್ಪಿ ಮಲ್ಲೇಶ್ ನೈತೃತ್ವದಲ್ಲಿ ಪಥ ಸಂಚಲನೆ ಪ್ರಾರಂಭಿಸಿದ ಪೊಲೀಸ್ ಸಿಬ್ಬಂದಿಗಳು ಪೇಟೆಬೀದಿ ಸೇರಿದಂತೆ ಪಟ್ಟಣದ ಗಡಿಯಾದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಪರೇಡ್ ನಡೆಸಿ ಮಾ. 7ರ ಗುರುವಾರದಂದು ನಡೆಯುವ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ತಮ್ಮ ಶಕ್ತಿಯ ಪ್ರದರ್ಶನ ಮಾಡಿದರು. ಪುರಸಭೆಯ ಒಟ್ಟು 23 ಮತ ಕ್ಷೇತ್ರಗಳ ಚುನಾವಣೆಗೆ ಒಟ್ಟು 27 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 9 ಅತೀ ಸೂಕ್ಷ್ಮ, 14 ಸೂಕ್ಷ್ಮ, 4 ಸಾಮಾನ್ಯ ಮತಗಟ್ಟೆಗಳೆಂದು ವಿಭಾಗಿಸಲಾಗಿದೆ. ರಕ್ಷಣಾ ಕಾರ್ಯಕ್ಕಾಗಿ ಒಬ್ಬರು ಡಿ.ವೈ.ಎಸ್ಪಿ, ವೃತ್ತನಿರೀಕ್ಷಕ ಸೇರಿದಂತೆ 89 ಎಸ್ಐ ಮತ್ತು 14 ಸಹಾಯಕ ಸಬ್ಇನ್ಸ್ಪೆಕ್ಟರ್ಗಳು, 38 ಜನ ಮುಖ್ಯಪೇದೆ ಸೇರಿದಂತೆ 71 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ 30 ಮಂದಿ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಡಾ.ಪ್ರಕಾಶ್ ತಿಳಿಸಿದರು.