ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿತ್ಯಾನಂದನಿಂದ ಶಾಂತಿ ಭಂಗ; ಪೊಲೀಸರಿಗೆ ದೂರು

Rashmi Kasaragodu
Updated On : 7 Mar 2013, 11:56 am

ಕ.ಪ್ರ. ವಾರ್ತೆ,  ರಾಮನಗರ,  ಮಾ, 6-
ಬಿಡದಿ ಧ್ಯಾನಪೀಠದ ಕಪಟಿ ಸ್ವಾಮಿ ನಿತ್ಯಾನಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ಮಠ ಕಬಳಿಸಲು ಸಂಚು ನಡೆಸಿ, ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪೊಲೀಸರಿಗೆ ದೂರು ಸಲ್ಲಿಸಿದೆ.
ವೇದಿಕೆ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ್ ಬೆಂಬಲಿಗರ ಜತೆಗೂಡಿ ಬುಧವಾರ ಬಿಡದಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ದೂರುದಾರರಿಗೆ ಪೊಲೀಸರು ಸ್ವೀಕೃತಿ ಪತ್ರ ನೀಡಿದ್ದು, ಪ್ರಕರಣ ದಾಖಲಾದ ಕುರಿತು ತಡರಾತ್ರಿವರೆಗೆ ಯಾವುದೇ ಮಾಹಿತಿ ಇಲ್ಲ.
ದೂರಿನ ಸಾರಾಂಶ: ಶ್ರೀ ಮಹಾಲಿಂಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಯೋಗಿ ರಾಜೇಂದ್ರ  ಸ್ವಾಮೀಜಿ ಅವರನ್ನು  ಸನ್ಮಾನಿಸುವ ನೆಪದಲ್ಲಿ ಬಿಡದಿ ಆಶ್ರಮಕ್ಕೆ ಕರೆಸಿಕೊಂಡು, ಉತ್ತರಾಧಿಕಾರತ್ವ ಪಡೆಯುವುದರೊಂದಿಗೆ ಆ ಮಠದ ಆಸ್ತಿ ಕಬಳಿಸಲು ನಿತ್ಯಾನಂದ ಸಂಚು ರೂಪಿಸಿದ್ದಾನೆ ಎಂದು ಭೀಮಾಶಂಕರ ಪಾಟೀಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.   ಮಹಾಲಿಂಗೇಶ್ವರ ಮಠದ ಪೀಠಾಧ್ಯಕ್ಷರೇ ತಮ್ಮನ್ನು  ಉತ್ತರಾಧಿಕಾರಿ ಆಗುವಂತೆ ಆಹ್ವಾನ ನೀಡಿದ್ದಾರೆ. ಆದ್ದರಿಂದ ತನ್ನ ಭಕ್ತರನ್ನು ಮಹಾಲಿಂಗಪುರಕ್ಕೆ ಕಳುಹಿಸಲು ನಿರ್ಧರಿಸಿದ್ದೇನೆ ಎಂದು ನಿತ್ಯಾನಂದ ಹೇಳಿಕೆ ನೀಡಿದ್ದು, ಇದರಿಂದ ವೀರಶೈವ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement