ಪ್ರಾಮಾಣಿಕರನ್ನು ಆಯ್ಕೆ ಮಾಡಿ
ದೊಡ್ಡಬಳ್ಳಾಪುರ: ಮತದಾರರೇ ಜಾಗೃತರಾಗಿ...5 ವರ್ಷಗಳ ಊರಿನ ಭವಿಷ್ಯವನ್ನು ನಿರ್ಧರಿಸುವ ಹೊಣೆಯಾಧಾರಿತ ಕಾರ್ಯವನ್ನು ಎಚ್ಚರಿಕೆಯಿಂದ ಮಾಡಿ. ಬೆಳೆಯುತ್ತಿರುವ ನಗರದ ಸಮಗ್ರ ಆಗು-ಹೋಗುಗಳಿಗೆ ಪೂರಕವಾಗಿ ಯೋಜನಾಬದ್ಧ ಅಭಿವೃದ್ಧಿ ಸ್ಪಷ್ಟ ದೃಷ್ಟಿಕೋನ ಮತ್ತು ಇಚ್ಛಾಶಕ್ತಿಯನ್ನು ಹೊಂದಿರುವ ಜನರನ್ನು ಆಯ್ಕೆ ಮಾಡುವಲ್ಲಿ ನಿರಾಯಕ ಪಾತ್ರ ವಹಿಸಿ ಎಂದು ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಟ್ರಸ್ಟ್(ರಿ) ಮತ್ತು ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘಟನೆಗಳು ಮತದಾರರಲ್ಲಿ ಮನವಿ ಮಾಡಿವೆ.