ವಿಜಯಪುರ ಶೇ.83 ಮತದಾನ
ದೇವನಹಳ್ಳಿ: ದೇವನಹಳ್ಳಿ ಮತ್ತು ವಿಜಯಪುರ ಪುರಸಭೆಗಳಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ದೇವನಹಳ್ಳಿಯಲ್ಲಿ ಶೇ.83.78 ಹಾಗೂ ವಿಜಯಪುರದಲ್ಲಿ ಶೇ.83.34 ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಡಾ. ವೆಂಕಟರಾಜು ತಿಳಿಸಿದ್ದಾರೆ. ದೇವನಹಳ್ಳಿಯ ವಾರ್ಡ್ ನಂ 10 ರ ನೀಲೇರಿ ಮತಗಟ್ಟೆಯಲ್ಲಿ ಅತಿ ಹೆಚ್ಚು93.84 ಹಾಗೂ ಅತಿ ಕಡಿಮೆ ವಾರ್ಡ್ ನಂ. 22 ರ ಪ್ರಶಾಂತ ನಗರ ಮತಗಟ್ಟೆಯಲ್ಲಿ ಶೇ.68.51 ರಷ್ಟು ಮತದಾನ ನಡೆದಿದೆ. ವಿಜಯಪುರದ ವಾರ್ಡ್ ನಂ 14 ರ ಸುಣಕಲ್ ಪೇಟೆ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ. 92.06 ಹಾಗೂ ಅತಿ ಕಡಿಮೆ ವಾರ್ಡ್ ನಂ 21 ಗುರಪ್ಪ ಮಠದ ಮತಗಟ್ಟೆಯಲ್ಲಿ ಶೇ. 67.38 ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.