ನಾಳೆ ಶಿವರಾತ್ರಿ ವಿಶೇಷ ಪೂಜೆ
ಮಂಡ್ಯ: ನಗರದ ಚಾಮುಂಡೇಶ್ವರಿ ನಗರದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಮಾ.10 ಮತ್ತು 11 ರಂದು ಮಹಾ ಶಿವರಾತ್ರಿ ಮತ್ತು ಶನೇಶ್ವರ ಜಯಂತಿ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.10 ರಂದು ಬೆಳಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಶನೇಶ್ವರ ಹೋಮ, ಪೂರಹುತಿ, 8.30 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಾ.11 ರಂದು ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ, ವಿಶೇಷ ಬೆಣೆ ಅಲಂಕಾರ, 8 ಗಂಟೆಗೆ ಮಹಾಮಂಗಳಾರತಿ ಹಾಗೂ 8.30ಕ್ಕೆ ರಾಶಿ ಪೂಜೆ ಜರುಗಲಿದೆ.
ವಿವಿಧ ಕಾರ್ಯಕ್ರಮ
ಕೆ.ಆರ್.ಪೇಟೆ: ದೊಡ್ಡಗಾಡಿನಹಳ್ಳಿ ಶನಿದೇವರ ದೇವಾಲಯ ಆವರಣದಲ್ಲಿ ಮಾ.10ರಂದು ಮಹಾ ಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಮಾ.10ರಂದು ಶನಿದೇವರ ಕರಗ, ಬಾಯಿಬೀಗ, ಶನಿದೇವರ ಪಲ್ಲಕ್ಕಿ ಉತ್ಸವ, ಮುಡಿ, ಶನಿಮಹಾತ್ಮೆ ಅಥವಾ ರಾಜವಿಕ್ರಮ ನಾಟಕ ಪ್ರದರ್ಶನ ರಾತ್ರಿಯಿಡಿ ನಡೆಯಲಿವೆ. ಮಾ.11ರಂದು ಬೆಳಿಗ್ಗೆ ಕೊಂಡೋತ್ಸವ ನಡೆಯಲಿದೆ.