'ಮಾಗಡಿಯಲ್ಲಿ ಹೈನೋದ್ಯಮ ಕ್ರಾಂತಿ'
ಮಾಗಡಿ: ತಾಲೂಕಿನಲ್ಲಿ ಹೈನೋದ್ಯಮ ಕ್ರಾಂತಿಯಾಗಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ಹೇಳಿದರು.
ತಾಲೂಕು ಪಶು ಚಿಕಿತ್ಸಾ ಕೇಂದ್ರದಲ್ಲಿ ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಮೇವು ಕಟಾವು ಯಂತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಪಶುಗಳಿಗೆ ನೀಡುವ ಹಸಿರು ಆಹಾರ ಸಮರ್ಪಕವಾಗಿ ಬಳಕೆ ಮಾಡದೆ ವ್ಯರ್ಥವಾಗುತ್ತಿದೆ. ಪಶುಗಳಿಗೆ ಉತ್ತಮ ರೀತಿಯಲ್ಲಿ ಹಸಿರು ಮೇವು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಈ ಮೇವು ಕಟಾವು ಯಂತ್ರ ಸಹಕಾರಿಯಾಗಲಿದೆ. ಸರ್ಕಾರದ ಸಹಾಯಧನದಲ್ಲಿ ಮೇವು ಕಟಾವು ಯಂತ್ರ ವಿತರಣೆ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭ ಸುಮಾರು 9 ಲಕ್ಷ ವೆಚ್ಚದ ಮೇವು ಕಟಾವು ಯಂತ್ರವನ್ನು ಸಹಾಯಧನದಲ್ಲಿ ಪಶು ಇಲಾಖೆಯ ಜಂಟಿ ನಿರ್ದೇಶಕ ಡಾ. ರಾಥೋಡ್ ರೈತರಿಗೆ ವಿತರಿಸಿದರು.
ಡಾ.ಜಯಶ್ರೀ ಮೇವು ಕಟಾವು ಯಂತ್ರ ಬಳಕೆ, ಉಪಯೋಗ ಕುರಿತು ವಿವರಿಸಿದರು