ರಸ್ತೆ ಅಪಘಾತ: ಲಾರಿ ಚಾಲಕ ಸಾವು
ಹೊಸಕೋಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4, ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರದ ಮುಂಭಾಗ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಮೃತಪಟ್ಟಿದ್ದಾನೆ. ಜ್ಯೋತಿಪುರ ವಾಸಿ ಆನಂದ (49) ಮೃತ ಚಾಲಕ, ಬೆಂಗಳೂರಿಗೆ ಸಂಚರಿಸುತ್ತಿದ್ದ ಲಾರಿ ಆಕಸ್ಮಿಕವಾಗಿ ಮುಂದೆ ನಿಂತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಮುಂಭಾಗ ನಿಂತಿದ್ದ ಚಾಲಕನ ದೇಹದ ಮೇಲೆ ಲಾರಿ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.