ವಾಟರ್ ಟ್ಯಾಂಕ್ ಕಾಮಗಾರಿ ಕಳಪೆ: ಆರೋಪ
ನೆಲಮಂಗಲ: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಿರುವ ನೂತನ ಮಿನಿ ವಾಟರ್ ಟ್ಯಾಂಕ್ ಕಾಮಗಾರಿ ಸಂಪೂರ ಕಳಪೆಯಿಂದ ಕೂಡಿರುವುದರಿಂದ ನೀರು ಟ್ಯಾಂಕ್ಗೆ ಬರುವ ಮುನ್ನವೇ ಚರಂಡಿ ಪಾಲಾಗುತ್ತಿದೆ ಎಂದು ಗ್ರಾಮ ಯುವ ಮುಖಂಡ ರಾಮು ಆರೋಪಿಸಿದ್ದಾರೆ.
ತಾಲೂಕು ಪಂಚಾಯ್ತಿ ವತಿಯಿಂದ ಕುಡಿಯುವ ನೀರಿನ ಕಾಮಗಾರಿಯನ್ನು ಬಹಳ ದಿನಗಳಿಂದಲೂ ನಡೆಸದೆ ಹಾಗೆಯೇ ಬಿಟ್ಟಿದ್ದರೂ ಗ್ರಾಮಸ್ಥರ ತೀವ್ರ ಒತ್ತಡದಿಂದ ಕಾಮಗಾರಿ ಪೂರಗೊಳಿಸಲು ಮುಂದಾಗಿದೆ. ಟ್ಯಾಂಕ್ನ ಪಕ್ಕದಲ್ಲಿ ಸಿಮೆಂಟ್ನಿಂದ ಭದ್ರವಾಗಿ ಕಾಂಕ್ರೀಟ್ ಹಾಕಬೇಕು. ಆದರೆ, ಸಿಮೆಂಟ್ ಬಳಸದೆ ಸಂಪೂರ ಮಣಿನಿಂದಲೇ ಕೆಲಸ ಪೂರಗೊಳಿಸಿ ಕಾಮಗಾರಿಗೆ ನೀಡುವ ಸಂಪೂರ ಮೊತ್ತದ ಹಣವನ್ನು ಗುತ್ತಿಗೆದಾರರು ಪಡೆದುಕೊಂಡಿದ್ದಾರೆ ಎಂದು ದೂರಿದರು.
ಈ ಕಳಪೆ ಕಾಮಗಾರಿಯನ್ನು ಶೀಘ್ರವಾಗಿ ಸರಿಪಡಿಸದಿದ್ದರೆ ತಾಲೂಕು ಪಂಚಾಯ್ತಿ ಸದಸ್ಯರ ಮನೆ ಮುಂದೆ ಮತ್ತು ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.