ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಧರಶಾಲೆಗೆ ರು. 82 ಸಾವಿರ ಹಣ ದೇಣಿಗೆ

Rashmi Kasaragodu
Updated On : 10 Mar 2013, 12:38 pm

ಚನ್ನಪಟ್ಟಣ: ಬೆಂಗಳೂರಿನ ಅಮೃತ ನೇತ್ರಧಾಮ ಅಂಧರಶಾಲೆಗೆ ಪಟ್ಟಣದ ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ವತಿಯಿಂದ 82 ಸಾವಿರ ರು. ಹಣವನ್ನು ದೇಣಿಗೆಯಾಗಿ ನೀಡಿದೆ.
ಶಾಲೆಯ ಆವರಣದಲ್ಲಿ ಅಂಧರಶಾಲೆಯ ವಿದ್ಯಾರ್ಥಿಗಳಿಗೆ ದೇಣಿಗೆಯ ಚಕ್ ವಿತರಿಸಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ಲಿಂಗೇಶ್ ಕುಮಾರ್ ಅಂಧಮಕ್ಕಳಿಗೆ ಅಕ್ಷರದ ಬೆಳಕು ನೀಡುತ್ತಿರುವ ಪ್ರಯತ್ನ ನಿಜಕ್ಕೂ ಮಹತ್ವವಾದುದು ಎಂದರು.
ಕಣ್ಣುಕಳೆದು ಕೊಂಡು ಬಾಲ್ಯದಲ್ಲೇ ಕತ್ತಲೆಗೆ ದೂಡಲ್ಪಡುವ ಅಂಧಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಅಂಧರಶಾಲೆಯ ಕೊಡುಗೆ ಮಹತ್ವದಾಗಿದ್ದು ಇಂತಹ ಶಾಲೆಗಳಿಗೆ ನಮ್ಮ ಸಂಸ್ಥೆ ಕೂಡ ಸಹಾಯಹಸ್ತ ಚಾಚಿದೆ. ಇಂತಹ ಸದುದ್ದೇಶದ ಕಾರ್ಯಗಳಿಗೆ ಕೇಂಬ್ರಿಡ್ಜ್ ವಿದ್ಯಾಸಂಸ್ಥೆ ನಿರಂತರವಾಗಿ ಸಹಕಾರ ನೀಡಲಿದೆ ಎಂದರು. ಅಂಧಮಕ್ಕಳ ಭವಿಷ್ಯ ರೂಪಿಸುವ ಸಂಸ್ಥೆಗಳಿಗೆ ದಾನಿಗಳು ಹೆಚ್ಚಿನ ನೆರವು ನೀಡಿ ಅವರಿಗೆ ಗುಣಮಟ್ಟದ ಶಿಕ್ಷಣ ದೊರಕುವ ವಾತಾವರಣ ನಿರ್ಮಿಸಿ ಕೊಡುವ ಮೂಲಕ ಬಲಿಷ್ಠ ಸಮಾಜ ನಿರ್ಮಿಸಲು ಮುಂದಾಗ ಬೇಕೆಂದು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಚಿತ್ರಾ ಲಿಂಗೇಶ್‌ಕುಮಾರ್, ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ನಿಂಗೇಗೌಡ, ಮುಖ್ಯಶಿಕ್ಷಕಿ ರೇಣುಕಾದೇವಿ ಮತ್ತು ಅಮೃತ ನೇತ್ರದಾಮದ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement