ಪಕ್ಷೇತರ ಅಭ್ಯರ್ಥಿ ಮೇಲೆ ಹಲ್ಲೆ , ಪ್ರಾಣ ಬೆದರಿಕೆ
ಚನ್ನಪಟ್ಟಣ: ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪೊಂದು ಪಕ್ಷೇತರ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಲು ಮುಂದಾಗಿ, ಪ್ರಾಣಬೆದರಿಕೆ ಹಾಕಿರುವ ಘಟನೆ ಪಟ್ಟಣದ 8ನೇ ವಾರ್ಡಿನಲ್ಲಿ ನಡೆದಿದೆ.
8ನೇ ವಾರ್ಡಿನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಸಂತಮ್ಮ ಅವರ ಮೇಲೆ ಅದೇ ವಾರ್ಡಿಗೆ ಸೇರಿದ 8 ಮಂದಿ ಹಲ್ಲೆ ನಡೆಸಲು ಮುಂದಾಗಿದ್ದರೆನ್ನಲಾಗಿದ್ದು, ತಮ್ಮ ಅಭ್ಯರ್ಥಿ ಸೋಲು ಅನುಭವಿಸಿದರೆ ನಿನ್ನಿಂದಲೇ, ಅವರೇನಾದರೂ ಸೋತರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರೆಂದು ವಸಂತಮ್ಮ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.