ಶಾಲೆಯಲ್ಲಿ ಮಹಿಳಾ ದಿನಾಚರಣೆ
ಹೊಸಕೋಟೆ: ಪಟ್ಟಣದ ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸ್ಟೇಟ್ ಬ್ಯಾಂಕ್ ಆಪ್ ಹೈದರಾಬಾದ್ ಶಾಖೆಯ ವ್ಯವಸ್ಥಾಪಕಿ ದಯಾಕೇಶ್ವರಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಮಹಿಳೆಯರು ಹಿಂದುಳಿಯದೆ ಪುರುಷನಷ್ಟೇ ಸಮಾನವಾಗಿ ಬೆಳೆಯುತ್ತಿರುವುದು ಮಹಿಳಾ ಪ್ರಧಾನ ಸಮಾಜಕ್ಕೆ ನಾಂದಿಯಾಗಲಿದೆ ಎಂದರು.