ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶೆಟ್ಟಿಹಳ್ಳಿ-ಚನ್ನಪಟ್ಟಣ ಡಬ್ಲಿಂಗ್ ಪೂರ್ಣ; ನಾಳೆ ರೈಲು ಸಂಚಾರ

Rashmi Kasaragodu
Updated On : 10 Mar 2013, 12:39 pm

ಬೆಂಗಳೂರು: ರಾಮನಗರ-ಮೈಸೂರು ನಡುವೆ ರೇಲ್ವೆ ಹಳಿ ಡಬ್ಲಿಂಗ್ ಯೋಜನೆಯ ಭಾಗವಾಗಿರುವ ಶೆಟ್ಟಿಹಳ್ಳಿ ಹಾಗೂ ಚನ್ನಪಟ್ಟಣ ನಡುವಿನ ನೂತನ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶೆಟ್ಟಿಹಳ್ಳಿ ಹಾಗೂ ಚನ್ನಪಟ್ಟಣ ನಡುವೆ ಮಾ.11 ಸೋಮವಾರ ಮಧ್ಯಾಹ್ನ 12 ಗಂಟೆಯ ಬಳಿಕ ಪ್ರಯೋಗಿಕವಾಗಿ ವೇಗವಾಗಿ ರೈಲು ಸಂಚರಿಸಲಿದೆ. ದಕ್ಷಿಣ ವಲಯದ ರೇಲ್ವೆ ಸುರಕ್ಷತಾ ಆಯುಕ್ತರು ನೂತನ ಹಳಿಯ ಮೇಲೆ ಪ್ರಾಯೋಗಿಕ ರೈಲು ಸಂಚಾರ ವೀಕ್ಷಿಸಲ್ಲಿದ್ದಾರೆ.
ಪ್ರಾಯೋಗಿಕ ಸಂಚಾರದ ವೇಳೆ ರೈಲು ಗಂಟೆಗೆ 100 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ರೈಲು ಹಳಿಗಳ ಬಳಿ ಬರುವುದು ಹಾಗೂ ಹಳಿ ದಾಟುವುದು ಮಾಡಬಾರದು. ಅನಿವಾರ್ಯವಿದ್ದಲ್ಲಿ ಸೂಕ್ತ ಕಾಳಜಿ ವಹಿಸುವಂತೆ ರೇಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
'ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ'
ಸೂಲಿಬೆಲೆ: ಮಹಿಳೆಯರು ಇಂದೂ ಎಲ್ಲ ರಂಗದಲ್ಲಿಯೂ ಸಾಧನೆ ಶಿಖರವೇರುವಂಥ ಸಾಮಥ್ಯವನ್ನು ಹೊಂದಿದ್ದು, ಇದಕ್ಕಿರುವ ಅವಕಾಶಗಳನ್ನು ಬಳಿಸಿಕೊಂಡು ಪುರುಷನ ಸಮಾನ ಬೆಳೆಯುವಂತಾಗಬೇಕು ಎಂದು ಪದವಿ ಕಾಲೇಜು ಪ್ರಭಾರಿ ಪ್ರಾಂಶುಪಾಲ ಪ್ರೊ.ವೈ ವೆಂಕಟೇಶ್ ಹೇಳಿದ್ದಾರೆ. ಸೂಲಿಬೆಲೆ ಪದವಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಡಾ.ಆದಿ ನಾರಾಯಣಪ್ಪ ಮಾತನಾಡಿ, ಬೆಳೆಯುತ್ತಿರುವ ತಂತ್ರಜ್ಞಾನ ಮಹಿಳೆಯರ ಪಾಲಿಗೆ ಮಾರಕವಾಗುತ್ತಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಭಾರತಕ್ಕೇ ಸಿಮೀತವಾಗಿಲ್ಲ. ವಿಶ್ವದೆಲ್ಲಡೆ ಇದೆ. ಸಮಾನ ಬೆಳವಣಿಗೆ ಹೊಂದಲು ಪ್ರತಿ ಹೆಣ್ಣಿಗೂ ಶಿಕ್ಷಣ ಅಗತ್ಯವಾಗಿದೆ ಎಂದರು. ಉಪನ್ಯಾಸಕಿ ಲಕ್ಷ್ಮಿ ಮಾತನಾಡಿ, ಹೆಣ್ಣು ತನ್ನ ಜೀವನದಲ್ಲಿ ಹತ್ತಾರು ಘಟ್ಟಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾಳೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಾಗಲು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು. ಉಪನ್ಯಾಸಕಿ ಮಂಗಳ, ರಘನಂದನ್, ಪ್ರೊ.ನಾರಾಯಣಸ್ವಾಮಿ, ಸಂತೋಷ್ ಸೇರಿದಂತೆ ಉಪನ್ಯಾಸಕ ವರ್ಗದವರು ಹಾಜರಿದ್ದರು.
ಸಂಗೀತ ಶಿಕ್ಷಣ ಶಿಬಿರಕ್ಕೆ ಅರ್ಜಿ
ಬೆಂಗಳೂರು:  ಭಾರತ ಭಾರತೀ ಸಂಗೀತ ಸೇವಾ ಪ್ರತಿಷ್ಠಾನ ಸುಸ್ವರ ಭಾರತೀ ಮತ್ತು ಜಯರಾಮ ಸೇವಾ ಮಂಡಳಿ ಸಹಯೋಗದೊಂದಿಗೆ ಉಚಿತ ಸಂಗೀತ ಶಿಕ್ಷಣ ಶಿಬಿರ ನಡೆಸಲು ಮುಂದಾಗಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಸರು ನೊಂದಾಯಿಸಿಕೊಳ್ಳಲು ಏ.5ಕೊನೆಯ ದಿನ. ಹೆಚ್ಚಿನ ಮಾಹಿತಿಗೆ 89042 35300 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement