2 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ
ಕ.ಪ್ರ.ವಾರ್ತೆ ವಿಜಯಪುರ ಮಾ.10
ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಬೈಪಾಸ್ ಚನ್ನರಾಯಪಟ್ಟಣ ಬೂದಿಗೆರೆ ರಸ್ತೆಯ ಪಕ್ಕದ ನೀಲಗಿರಿ ತೋಪಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ಅಬಕಾರಿ ಇಲಾಖೆಯವರು ವಶ ಪಡಿಸಿಕೊಂಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಅಬಕಾರಿ ಇನ್ಸ್‌ಪೆಕ್ಟರ್ ತ್ರಿನೇತ್ರ ಅವರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸುಮಾರು 864 ಲೀಟರ್ 2ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಜಯಪುರದಲ್ಲಿ ಪುರಸಭೆಯ ಚುನಾವಣೆ ಮಾ. 7ರಂದು ನಡೆದ್ದಿದ್ದು ಈ ಚುನಾವಣೆಗಾಗಿ ತರಿಸಿಟ್ಟಿದ್ದ ಮದ್ಯವನ್ನು ಮತದಾರರಿಗೆ ಹಂಚಲು ಬಿಗಿ ಪೊಲೀಸ್ ಬಂದೋಬಸ್ತ ಇದ್ದ ಕಾರಣ ಊರಿನ ಆಚೆ ನೀಲಗಿರಿ ತೋಪಿನಲ್ಲಿ ಅಡಗಿಸಿಟ್ಟಿರಬಹುದು ಎಂದು ಶಂಕಿಸಲಾಗಿದೆ.