ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇಗುಲಮಠದ ಬೆಳವಣಿಗೆಗೆ ಶ್ರಮಿಸಲು ಕರೆ

Mainashree
Updated On : 10 Mar 2013, 11:48 am

ಕ.ಪ್ರ.ವಾರ್ತೆ ಕನಕಪುರ ಮಾ.10
ಆರು ಶತಮಾನಗಳ ಇತಿಹಾಸವಿರುವ, ತ್ರಿವಿಧ ದಾಸೋಹಗಳಿಗೆ ಹೆಸರಾಗಿರುವ ಕನಕಪುರದ ದೇಗುಲಮಠದಲ್ಲಿ ವ್ಯಾಸಂಗ ನಡೆಸಿ ಅನೇಕ ದೇಶಗಳಲ್ಲಿ, ರಾಜ್ಯಗಳಲ್ಲಿ ನೆಲೆಸಿರುವ ಶ್ರೀಮಠದ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿ ದೇಗುಲಮಠದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಶಾಸಕ ನೆ.ಲ.ನರೇಂದ್ರಬಾಬು ಹೇಳಿದ್ದಾರೆ.
ಅವರು ದೇಗುಲಮಠದ ಶ್ರೀ ಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಶ್ರೀ ಮುಮ್ಮಡಿ ನಿರ್ವಾಣಸ್ವಾಮೀಜಿ ಹಾಗೂ ಶ್ರೀ ಮುಮ್ಮಡಿ ಮಹಾಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಡಿಜಿಪಿ ಆರ್.ಎಂ. ವಸಂತಕುಮಾರ್ ಶ್ರೀಮಠದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಶ್ರೀಮಠದ ಹಿರಿಯ ವಿದ್ಯಾರ್ಥಿಗಳಾದ ಉದ್ಯಮಿ ಎಂ.ವಿ. ಕೀರ್ತಿಹಾಸನ್, ಟಿ.ಕೆ.ಹೊನ್ನಪ್ಪ, ವೀರತ್ತಯ್ಯ, ಬಾಲೇಗೌಡ, ಬಿ.ಪುಟ್ಟಣ್ಣ, ಪಾಲ್ಗೊಂಡಿದ್ದರು. ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು ಹಾಗೂ ದೇಗುಲಪ್ರಭೆ ಮಾಸಿಕದ ಚಂದಾದಾರರನ್ನು ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಯಿತು. ಆಡಳಿತಾಧಿಕಾರಿ ಬಿ.ಪುಟ್ಟಣ್ಣ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಲಿಂಗು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement