ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಸವಣ್ಣನ ವಚನಗಳ ಚಿಂತನೆ ಪುತ್ಥಳಿಯಲ್ಲಿ ಕಾಣಲಿ

Mainashree
Updated On : 10 Mar 2013, 11:50 am


ಕ್ರಾಂತಿ ಕಾರಿ ಬಸವಣ್ಣನ ವಚನಗಳ  ಚಿಂತನೆ  ಪುತ್ಥಳಿಯಲ್ಲಿ ಕಾಣಬೇಕು ಎಂದು  ಸುಪ್ರೀಂ ಕೋರ್ಟ್  ನಿವೃತ್ತ  ನ್ಯಾಯಮೂರ್ತಿ ಶಿವರಾಜ  ಪಾಟೀಲ್ ನುಡಿದರು.
  ಅವರು ತಾಲೂಕಿನ ಸಮೀಪದ ಕನ್ನಲ್ಲಿ ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ  ಲಂಡನ್ ಬಸವ ಅಂತರ ರಾಷ್ಟ್ರೀಯ  ಪ್ರತಿಷ್ಠಾನ  ಮತ್ತು  ಬೆಂಗಳೂರು  ಪಟೇಲ್ ಕೆ. ಸಾವಂದಯ್ಯ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ  ಜಗಜ್ಯೋತಿ ಬಸವೇಶ್ವರರ ಪುತ್ಥಳಿಕೆ ಅನಾವರಣ ಹಾಗು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎಸ್. ಮಹದೇವಯ್ಯ ಅವರ 75ನೇ ಹುಟ್ಟುಹಬ್ಬದ ಸಮಾರಂಭದಲ್ಲಿ  ಜಗಜ್ಯೋತಿ ಬಸವೇಶ್ವರ  ಕಂಚಿನ ಪುತ್ಥಳಿಕೆ ಅನಾವರಣಗೊಳಿಸಿ ಮಾತನಾಡಿದರು.
 ನಮ್ಮ ದೇಶದಲ್ಲಿ ಪುತ್ಥಳಿಕೆಯ ಸಂಖ್ಯೆಗೇನು ಕಮ್ಮಿಯಿಲ್ಲ, ಕೇವಲ ಪ್ರತಿಮೆಗಳನ್ನು ಅನಾವರಣಗೊಳಿಸಿದರೆ ಸಾಲದು, ಪುತ್ಥಳಿಕೆಯಲ್ಲಿ ಬಸವಣ್ಣನ ಅಭಿಮಾನ ಕಾಣಬೇಕು. ಬಸವ ತತ್ವಗಳು, ವಚನಗಳು ಸಮಾಜಕ್ಕೆ ಎಂದೆಂದೂ ಪ್ರಸ್ತುತವಾಗಿದೆ. ಕನ್ನಲಿಯಲ್ಲಿನ ಬಸವೇಶ್ವರ ಪುತ್ಥಳಿಕೆ ಅನಾವರಣ ದೇಶಕ್ಕೆ ಮಾದರಿಯಾಗಲಿ ಎಂದರು.
ಮರು ಅಧ್ಯಯನವಾಗಿಲಿ:  ಬೇಲಿ ಮಠದ ಶಿವರುದ್ರಸ್ವಾಮೀಜಿ  ಸಾನಿಧ್ಯ ವಹಿಸಿ ಮಾತನಾಡಿ,  ಬಸವಣ್ಣನವರ ವಚನಗಳ ಚಿಂತನೆಗಳು ಮರು ಅಧ್ಯಯನವಾಗಬೇಕು. ವಾಸ್ತವಿಕ ನೆಲೆಯಲ್ಲಿ ಹಿಡಿದಿಡಬೇಕು.ಈ ನಿಟ್ಟಿನಲ್ಲಿ ಶರಣರನ್ನು ಗಟ್ಟಿಗೊಳಿಸಬೇಕು.
ಇತ್ತೀಚಿನ ದಿನಗಳಲ್ಲಿ ಮುಖ ತೊಳೆಯುವುದನ್ನು ಬಿಟ್ಟು, ಕನ್ನಡಿಯನ್ನು ತೊಳೆಯುವ ಕೆಲಸವಾಗುತ್ತಿದೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಬದುಕಿನಲ್ಲಿ  ಬಸವ ತತ್ವ, ಶುದ್ಧ ಕಾಯಕ, ನಿಷ್ಠೆ ಅಳವಡಿಕೆ ಜೀವನಾನಂದಕ್ಕೆ ಸ್ಫೂರ್ತಿಯಾಗಿದೆ.  ಬದುಕಿಗೆ ಚಿಂತನೆ ಅಗತ್ಯ ಎಂದು  ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಬೆಂಗಳೂರು ಶರಣ ಸಾಹಿತ್ಯ ಪರಿಷತ್  ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ  ಬಸವ  ಅಂತರ ರಾಷ್ಟ್ರೀಯ ಪ್ರತಿಷ್ಠಾನ  ಮೂಲಕ  ಡಾ.ಕೆ.ಎಸ್. ಮಹದೇವಯ್ಯ ಸೇವೆಯನ್ನು  ಶ್ಲಾಘಿಸಿದರು.
ಕೃತಿ ಬಿಡುಗಡೆ: ಇದೇ ವೇಳೆ ಬಸವಣ್ಣನವರ ವಚನ, ಕೆ.ಎಸ್.ಮಹದೇವಯ್ಯ ಅವರ ಅಭಿನಂದನಾ ಕೃತಿಯನ್ನು ಬಿಡುಗಡೆ ಗೊಳಿಸಿದರು. ಸಂಗೀತ ಕಲಾವಿದರಿಂದ ವಚನ ವಾಚನ ಗೋಷ್ಠಿ ಸಹ ನಡೆಯಿತು.
 ಖ್ಯಾತ ಕಲಾವಿದೆ ಹಾಗೂ ರಾಜ್ಯ ಸಭಾ ಸದಸ್ಯೆ ಬಿ. ಜಯಶ್ರೀ, ಕವಿ ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ, ಕೆ.ವಿ.ವಿ. ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ,  ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಕೊಡಿಗೆಹಳ್ಳಿ  ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ನಾಗರಾಜು, ರಾಷ್ಟ್ರೀಯ ಬಸವ ಪುರಸ್ಕೃತ ಡಾ. ರಂಜನ್ ದುರ್ಗಾ, ನಾಗರಾಜಮೂರ್ತಿ, ಅಕ್ಕ ಅನ್ನಪೂರ್ಣ, ಆರ್.ಜಿ.ಹಳ್ಳಿ ನಾಗರಾಜು, ಡಾ.ಕೆ.ಎಸ್. ಭಗವಾನ್, ಪಂಚಾಕ್ಷರಯ್ಯ, ಷಡಕ್ಷರಯ್ಯ, ಕೆ.ಎಸ್. ಪರಮಶಿವಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement