ಆನೇಕಲ್ ಪುರಸಭೆ ಅತಂತ್ರ: ಬಿಜೆಪಿ ಹಿನ್ನೆಡೆ
ಕ.ಪ್ರ. ವಾರ್ತೆ, ಆನೇಕಲ್, ಮಾ.11 ಆನೇಕಲ್ ಪುರಸಭೆಯ 23 ವಾರ್ಡುಗಳ ಫಲಿತಾಂಶ ಪ್ರಕಟವಾಗಿದ್ದು ಆಡಳಿತ ಬಿಜೆಪಿ 9 ಸ್ಥಾನಗಳನ್ನು ಪಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ಅವಧಿಯಿಂದಲೂ ಪುರಸಭೆಯ ಆಡಳಿತಿ ಬಿಜೆಪಿ ತೆಕ್ಕೆಯಲ್ಲಿದ್ದಿತು. ಕಳೆದ ಬಾರಿ 4 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ 6 ಸ್ಥಾನಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದೆ. ಅದೇ ರೀತಿ 2 ಸ್ಥಾನಗಳ ಜೆಡಿಎಸ್ 5 ಸ್ಥಾನಗಳನ್ನು ಗೆದ್ದಿದೆ.
ಈ ಬಾರಿ 3 ಪಕ್ಷೇತರ ಅಬ್ಯರ್ಥಿಗಳು ಆಯ್ಕೆಯಾಗಿದ್ದು ಆಡಳಿತ ಚುಕ್ಕಾಣಿ ಹಿಡಿಯಲು ನಿರ್ಣಾಯಕ ಪಾತ್ರ ವಹಿಸಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಮೂವರ ಪೈಕಿ 13 ನೇ ವಾರ್ಡಿನ ಹೆಚ್. ವಿ. ಚಂದ್ರಿಕ, 17ನೇ ವಾರ್ಡಿನ ರತ್ನಮ್ಮ ಮಹಿಳೆಯರಾಗಿದ್ದು 15ನೇ ವಾರ್ಡಿನ ವಿ. ಮೋಹನ್ ಜೆಡಿಎಸ್ ಬೆಂಬಲಿತ ಅಭ್ಯಥಿ.
ವಾರ್ಡು ವಾರು ವಿವರ: 1ನೇ ವಾರ್ಡಿನಿಂದ ಕಾಂಗ್ರೆಸ್ನ ಮಲ್ಲಿಕಾರ್ಜುನ್ 329 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಶ್ರೀನಿವಾಸ್ 236 ಪಡಿದಿದ್ದಾರೆ. ಈ ವಾರ್ಡಿನಲ್ಲಿ ತ್ರಿಕೋನ ಸ್ಪರ್ಧೆಯಿದ್ದಿತು.
2ನೇ ವಾರ್ಡಿನಿಂದ ಬಿಜೆಪಿಯ ಎಂ. ನಾರಾಯಣಸ್ವಾಮಿ 712 ಮತಗಳನ್ನು ಗಳಿಸಿ ವಿಜಯಿಯಾಗಿದ್ದಾರೆ. ಸಮೀಪದ ಪ್ರತಿಸ್ಫರ್ದಿ ಕಾಂಗ್ರೆಸ್ನ್ ಚಂದ್ರಾರೆಡ್ಡಿ 395 ಮತಗಳನ್ನು ಪಡೆದಿದ್ದಾರೆ. ಇಲ್ಲಿ ತ್ರಿಕೋನ ಸ್ಪಧೆಯಿದ್ದಿತು.
3ನೇ ವಾರ್ಡಿನಲ್ಲಿ ಬಿಜೆಪಿಯ ಶ್ರೀನಿವಾಸ್ 696 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಚಂದ್ರಶೇಖರ್ 370 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಿದೆ. ಈ ವಾರ್ಡಿನಲ್ಲಿ 5 ಜನರು ಸ್ಪರ್ಧಿಸಿದ್ದರು.
4ನೇ ವಾರ್ಡಿನಲ್ಲಿ ಬಿಜೆಪಿಯ ಟಿ.ಕೆ.ಪವಿತ್ರ 545 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಫರ್ದಿ ಜೆಡಿಎಸ್ನ ಸ್ನೇಹ 369 ಗಳನ್ನುಪಡೆದು ಪರಾಜಿತರಾಗಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದ್ದಿತು.
5ನೇ ವಾರ್ಡಿನಲ್ಲಿ ಜೆಡಿಎಸ್ನ್ ಲಕ್ಷ್ಮೀ ಕಾಂತರಾಜು 847 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಹೆಚ್. ಮೋಹನ್ 365 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ಇಲ್ಲಿ ನೇರ ಸ್ಪರ್ಧೆ ಇದ್ದಿತು.
6ನೇ ವಾರ್ಡಿನಲ್ಲಿ ಜೆಡಿಎಸ್ನ ಪದ್ಮನಾಭ(ಪದ್ದಿ) 808 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜೇಂದ್ರ ಪ್ರಸಾದ್ 175 ಮತಗಳನ್ನು ಪಡೆದಿರುತ್ತಾರೆ. ಇಲ್ಲಿ ನೇರ ಸ್ಪರ್ಧೆಇತ್ತು.
7ನೇ ವಾರ್ಡಿನಲ್ಲಿ ಬಿಜೆಪಿಯ ಸವಿತಾ ಶ್ರೀನಿವಾಸ್ 458 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ವಸಂತ ಕೃಷ್ಣಮೂರ್ತಿ 363 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ಇಲ್ಲಿ ಚತುಷ್ಕೋನ ಸ್ಪರ್ಧೆ ಇತ್ತು.
8ನೇ ವಾರ್ಡಿನಲ್ಲಿ ಜೆಡಿಎಸ್ ಉಷಾ 580 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಫರ್ದಿ ಕಾಂಗ್ರೆಸ್ನ್ ರತ್ಮಮ್ಮ ಪಡೆದು ಪರಾಜಿತರಾಗಿದ್ದಾರೆ. ಇಲ್ಲಿ ಚತುಷ್ಕೋನ ಸ್ಪರ್ಧೆ ಇದ್ದಿತು.
9ನೇ ವಾರ್ಡಿನಲ್ಲಿ ಬಿಜೆಪಿಯ ಸರಸಿಂಹರೆಡ್ಡಿ 505 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸ್ನ್ ಶ್ರೀನಿವಾಸಾಚಾರ್ 393 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ. ಈ ವಾರ್ಡಿನಲ್ಲಿ ಚತುಷ್ಕೋನ ಸ್ಪರ್ಧೆ.ಇದ್ದಿತು.
11ನೇ ವಾರ್ಡಿನಿಂದ ಕಾಂಗ್ರೆಸ್ ಸಿ.ಕೆ. ಹೇಮಲತಾ 578 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಉಮಾ ನಂಜಪ್ಪ ಅವರು262 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ. ಇಲ್ಲಿ ನೇರ ಸ್ಪರ್ಧೆ. ಇದ್ದಿತು.
12ನೇ ವಾರ್ಡಿನಿಂದ ಬಿಜೆಪಿಯ ಎಂ. ರಾಜರತ್ನಂ 491 ಮತ ಪಡೆದು ಜಯಗಳಿಸಿದ್ದಾರೆ.
13ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ಚಂದ್ರಿಕಾ ಹನುಮಂತರಾವ್ 449 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
15ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ವಿ. ಮೋಹನ್ 543 ಮತಪಡೆದು ಜಯಗಳಿಸಿದ್ದಾರೆ.
16ನೇ ವಾರ್ಡಿನಿಂದ ಬಿಜೆಪಿಯ ಕೆ. ನಾಗರಾಜು 799 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
17ನೇ ವಾರ್ಡಿ ಪಕ್ಷೇತರ ಅಭ್ಯರ್ಥಿ ವಿ. ಮುನಿರತ್ನಮ್ಮ 299 ಮತ ಪಡೆದು ಜಯಗಳಿಸಿದ್ದಾರೆ.
18ನೇ ವಾರ್ಡಿನಿಂದ ಕಾಂಗ್ರೆಸ್ ಇನಾಯತ್ ಉಲ್ಲಾ 639 ಮತ ಪಡೆದು ಜಯಗಳಿಸಿದ್ದಾರೆ.
19ನೇ ವಾರ್ಡಿನಿಂದ ಕಾಂಗ್ರೆಸ್ ಭದ್ರಾರೆಡ್ಡಿ 567 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
20 ನೇ ವಾರ್ಡಿನಿಂದ ಬಿಜೆಪಿಯ ಜಯಲಕ್ಷ್ಮಿ ಮುನಿರಾಜು 627 ಮತಗಳಿಂದ ಜಯಗಳಿಸಿದ್ದಾರೆ.
21ನೇ ವಾರ್ಡ್ ಜೆಡಿಎಸ್ ಅಶ್ವತ್ಥ ನಾರಾಯಣ 892 ಮತ ಪಡೆದು ಜಯಗಳಿಸಿದ್ದಾರೆ.
22ನೇ ವಾರ್ಡಿನಿಂದ ಕಾಂಗ್ರೆಸ್ ರೇಣುಕಾ ಶೇಷಾದ್ರಿ 571 ಮತ ಪಡೆದು ಜಯಗಳಿಸಿದ್ದಾರೆ.
23ನೇ ವಾರ್ಡಿನಿಂದ ಬಿಜೆಪಿಯ ಎಂ. ರಾಜಪ್ಪ 385 ಮತಗಳನ್ನು ಪಡೆದು ಜಯಗಳಿಸಿದ್ದಾರೆ.