ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಘಟಾನುಘಟಿಗಳಿಗೆ ಠೇವಣಿ ನಷ್ಟ

Rashmi Kasaragodu
Updated On : 12 Mar 2013, 1:25 am

ದೊಡ್ಡಬಳ್ಳಾಪುರ:  ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ, ಕಾರ್ಯದರ್ಶಿ ಮತ್ತು ಖಜಾಂಚಿಗಳ ಸ್ಪರ್ಧೆ ಆಘಾತಕಾರಿ ಠೇವಣಿ ಸೋಲಿನೊಂದಿಗೆ ಮುಕ್ತಾಯವಾಗಿದೆ. ಇಲ್ಲಿನ 17ನೇ ವಾರ್ಡ್ ಕಲ್ಲುಪೇಟೆಯಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಎಲ್.ಸಿ.ದೇವಕಿ ಕೇವಲ 62 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ. ಚಲಾವಣೆಯಾದ 803 ಮತಗಳಲ್ಲಿ ಶೇ.7.72 ಮತಗಳನ್ನು ಪಡೆದಿದ್ದಾರೆ. ಅದೇ ರೀತಿ 15ನೇ ವಾರ್ಡ್ ಚೌಡೇಶ್ವರಿಗುಡಿ ಬೀದಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಿಳಾ ಸಮಾಜದ ಕಾರ್ಯದರ್ಶಿ ಎಂ.ಕೆ.ವತ್ಸಲ 47 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾಗಿದ್ದ 1137 ಮತಗಳಲ್ಲಿ ಶೇ.4.13 ಮತ ಪಡೆದಿದ್ದಾರೆ. 10ನೇ ವಾರ್ಡ್ ವೀರಭದ್ರನಪಾಳ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಿಳಾ ಸಮಾಜದ ಖಜಾಂಚಿ ಯಶೋಧ 198 ಮತಗಳನ್ನು ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಚಲಾವಣೆಯಾಗಿದ್ದ 1986 ಮತಗಳಲ್ಲಿ ಶೇ.9.96 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್‌ಗೆ ಬೆಂಬಲ ಫಲಿತಾಂಶ ಸಾಕ್ಷಿ
ರಾಮನಗರ: ಜಿಲ್ಲೆಯಾದ್ಯಂತ ಆಡಳಿತ ವಿರೋಧಿ ಅಲೆ ಎದ್ದಿದೆ. ಬದಲಾವಣೆ ಬಯಸಿರುವ ಮತದಾರರು ಕಾಂಗ್ರೆಸ್ ಬೆಂಬಲಿಸಿರುವುದಕ್ಕೆ ಪ್ರಸಕ್ತ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ತಿಳಿಸಿದ್ದಾರೆ.  ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಸೆಮಿಫೈನಲ್ ಆಗಿದ್ದು, ಇದರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಮುಂದಿನ ವಿಧಾನ ಸಭೆ ಚುನಾವಣೆಯ ಫೈನಲ್ ನಲ್ಲೂ ನಮಗೆ ಗೆಲವಿನ ವಿಶ್ವಾಸವಿದೆ ಎಂದರು.   ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಲು ಶ್ರಮಿಸಿದ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸುವೆ. ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪುರಪಿತಣಗಳು ಶ್ರಮಿಸಬೇಕು. ಜನತೆಗೆ ನೀಡಿರುವ ಆಶ್ವಾನೆಗಳನ್ನು ಈಡೇರಿಸಬೇಕು ಎಂದು ಹೇಳಿದರು.  ಕಳೆದ ಒಂದು ದಶಕದಿಂದ ಅಧಿಕಾರದಲ್ಲಿರುವ ಸಂಸದ, ಶಾಸಕ ಹಾಗೂ ನಗರಸಭೆ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದರಿಂದ ರೊಚ್ಚಿಗೆದ್ದ ಜನತೆ ಕಾಂಗ್ರೆಸ್‌ಣಗೆ ಮತ ನೀಡಿದ್ದಾರೆ. ಜನರ ವಿಶ್ವಾಸಕ್ಕೆ ದ್ರೋಹ ಬಗೆಯದೆ, ನಂಬಿಕೆ ಉಳಿಸಿಕೊಳ್ಳಲು ಅವರು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement