ದೇವನಹಳ್ಳಿಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 9, ಪಕ್ಷೇತರರು 4
ಕನ್ನಡಪ್ರಭವಾರ್ತೆ ದೇವನಹಳ್ಳಿ ಮಾ.11
ದೇವನಹಳ್ಳಿ ಪುರಸಭೆಯ ಮತಗಳ ಎಣಿಕೆ ಕಾರ್ಯ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದು ಇಬ್ಬರು ಅಭ್ಯರ್ಥಿಗಳ ಅವಿರೋಧ ಆಯ್ಕೆ ಸೇರಿ ಕಾಂಗ್ರೆಸ್ 10 ಸ್ಥಾನಗಳನ್ನು, ಜೆಡಿಎಸ್ 9 ಸ್ಥಾನ ಹಾಗೂ ಒಬ್ಬರ ಅವಿರೋಧ ಸೇರಿ ಒಟ್ಟು 4 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ. 23 ಸ್ಥಾನಗಳ ಫಲಿತಾಂಶ ಇಂತಿದೆ:
ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಗಳು: ವಾರ್ಡ್ ನಂ.1- ನಾರಾಯಣಸ್ವಾಮಿ, ವಾರ್ಡ್ ನಂ.2 ಎಂ. ಆಶಾರಾಣಿ, ವಾರ್ಡ್ ನಂ. 5- ರತ್ನಮ್ಮ ಗಾರೆ ರವಿಕುಮಾರ್, ವಾರ್ಡ್ ನಂ.6. ಎನ್.ರಘು (ಅವಿರೋಧ), ವಾರ್ಡ್ ನಂ.7- ಶಾರದಮ್ಮ, ವಾರ್ಡ್ ನಂ.15- ಆರ್.ಕೆ.ಪದ್ಮಾವತಿ (ಅವಿರೋಧ), ವಾರ್ಡ್ ನಂ.16 ಎಂ.ಮೂರ್ತಿ, ವಾರ್ಡ್ ನಂ.17- ಜಿ.ವೇಣುಗೋಪಾಲ್, ವಾರ್ಡ್ ನಂ.18- ಮಂಜುನಾಥ್, ವಾರ್ಡ್ ನಂ.20 ಎಸ್. ಪುಷ್ಪ.
ಜೆಡಿಎಸ್ ಅಭ್ಯರ್ಥಿಗಳು: ವಾರ್ಡ್ ನಂ.3 ಎಂ.ಸೋಮಶೇಖರ ಬಾಬು, ವಾರ್ಡ್ ನಂ.9-ವಿ. ಗೋಪಾಲ್, ವಾರ್ಡ್ ನಂ.10- ಭಾಗ್ಯಮ್ಮ, ವಾರ್ಡ್ ನಂ. 11- ಶಾಂತಮ್ಮ, ವಾರ್ಡ್ ನಂ.12- ಜಿ.ಎ.ರವೀಂದ್ರ, ವಾರ್ಡ್ ನಂ.13-ಎಂ. ಕುಮಾರ್, ವಾರ್ಡ್ ನಂ.21-ಎಚ್.ಎಂ. ಗಾಯಿತ್ರಿ, ವಾರ್ಡ್ ನಂ.22- ನರಸಿಂಹಮೂರ್ತಿ, ವಾರ್ಡ್ ನಂ.23-ಎನ್. ಶಶಿಕುಮಾರ್.
ಪಕ್ಷೇತರ ಅಭ್ಯರ್ಥಿಗಳು: ವಾರ್ಡ್ ನಂ.4-ಬಿ. ದೇವರಾಜ್, ವಾರ್ಡ್ ನಂ 8 -ವಿ. ಗೋಪಾಲಕೃಷ್ಣ, ನಂ.14- ವೈ.ಸಿ.ಸತೀಶ್‌ಕುಮಾರ್(ಅವಿರೋಧ), ವಾರ್ಡ್ ನಂ.19- ಲಕ್ಷ್ಮೀ ಆಯ್ಕೆಯಾಗಿದ್ದಾರೆ.
ವಾರ್ಡ್ ನಂ.17 ರಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಜಿ.ವೇಣುಗೋಪಾಲ್ (280) ತಮ್ಮ ಸಮೀಪದ ಪ್ರತಿಸ್ಪರ್ಧಿ ಜಿ.ಸುರೇಶ್ (276) ಗಿಂತ ಕೇವಲ 4 ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ. ಪುರಸಭಾ ಮಾಜಿ ಅಧ್ಯಕ್ಷರಾಗಿದ್ದ ರತ್ನಮ್ಮ ಗಾರೆ ರವಿಕುಮಾರ್, ಉಪಾಧ್ಯಕ್ಷರಾಗಿದ್ದ ಎಂ. ಸೋಮಶೇಖರ ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಿ.ಎ.ರವೀಂದ್ರ, ಜಿ.ವೇಣುಗೋಪಾಲ್ ಮರು ಆಯ್ಕೆಯಾಗಿದ್ದಾರೆ.