ಜೆಡಿಎಸ್ ದಬ್ಬಾಳಿಕೆಗೆ ತಕ್ಕ ಪಾಠ: ಎ. ಮಂಜು
ಕನ್ನಡಪ್ರಭ ವಾರ್ತೆ ್ಣ ಮಾಗಡಿ ್ಣ ಮಾ.12
ಮಾಗಡಿ ಪಟ್ಟಣದ ಜನತೆ ಜೆಡಿಎಸ್ ಮುಖಂಡರ ದಬ್ಬಾಳಿಕೆಗೆ ಬೇಸತ್ತು ಈ ಬಾರಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಲೇವಡಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆದಿರುವ 600 ಕೋಟಿ ಹಗರಣದ ಹಣ ಚಲ್ಲಿದರೆ ಸಾಕು ಮತದಾರರು ಮತ ಹಾಕುತ್ತಾರೆ ಎಂಬ ಗುತ್ತಿಗೆದಾರರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಶಾಸಕರಿಗೆ ಈ ಬಾರಿ ಭಾರಿ ಮುಖಭಂಗವಾಗಿದೆ.
ಕಾಂಗ್ರೆಸ್ ಗೆಲವಿನಿಂದ ನಾವ್ಯಾರು ಬೀಗುತ್ತಿಲ್ಲ, ಜನರ ನಂಬಿಕೆ ಹುಸಿ ಆಗದಂತೆ ನಡೆದುಕೊಳ್ಳುತ್ತೇವೆ. ಬದ್ಧತೆಯಿಂದ ಪುರೋಭಿವೃದ್ಧಿಗೆ ಒಗ್ಗಟಿನಿಂದ ದುಡಿಯಲಾಗುವುದು ಎಂದು ಎಳಿಸಿದರು.
ಎರಡು ದೇಹ ಒಂದೇ ಹೃದಯ: ಡಾ.ಎಚ್.ಎಂ.ಕೃಷ್ಣಮೂರ್ತಿ,ನಾನು ಎರಡು ದೇಹ, ಒಂದೇ ಹೃದಯದ ಭಾವನೆಯಿಟ್ಟುಕೊಂಡಿದ್ದೇವೆ. ಕೆಪಿಸಿಸಿ ಆದೇಶಕ್ಕೆ ತಲೆಬಾಗಿ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಒಗ್ಗಟ್ಟಾಗಿ ದುಡಿಯುತ್ತೇವೆ. ಶುದ್ಧ ಕುಡಿಯುವ ನೀರು ಕಲ್ಪಿಸಲು ಯೋಜನೆ ರೂಪಿಸುತ್ತೇವೆ ಎಂದು ಎ.ಮಂಜು ತಿಳಿಸಿದರು.
ಮತ್ತೊಬ್ಬ ಮುಖಂಡ ಡಾ.ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ ಪುರಸಭೆ ಫಲಿತಾಂಶ ಸಂತೋಷ ತಂದಿದೆ. ಇನ್ನೇನಿದ್ದರೂ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸೋಲಿಸುವುದೇ ನಮ್ಮ ಮುಂದಿರುವ ಗುರಿ. ಜೆಡಿಎಸ್ ದಬ್ಬಾಳಿಕೆಯಿಂದ ನೊಂದಿರುವ ಶೋಷಿತರಿಗೆ ರಕ್ಷಣೆ ಕೊಡುವುದು, ಅವರ ದಬ್ಬಾಳಿಕೆಗೆ ಅಂತ್ಯವಾಡುವುದು. ನಾಡಪ್ರಭು ಕಟ್ಟಿರುವ ಕೆರೆ,ಕಟ್ಟೆಗಳನ್ನು ಉಳಿಸುವ ಹೋರಾಟಕ್ಕೆ ಮುಂದಾಗುವುದು. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯ ನಮ್ಮದು ಎಂದರು.
ಚಿಗಳೂರು ಗಂಗಾಧರ್, ಕಲ್ಪನಾಶಿವಣ್ಣ, ಕೆ.ಎಚ್.ಕೃಷ್ಣಮೂರ್ತಿ, ಬಿ.ಎಸ್.ಸುಹೇಲ್, ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿ.ವಿ.ಜಯರಾಮು, ಜುಟ್ಟನಹಳ್ಳಿ ಜಯರಾಮು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಮಂಜು,ಕೆ.ವಿ.ಬಾಲರಘು, ರಂಗಹನುಮಯ್ಯ, ಕುದೂರು ಪುರುಷೋತ್ತಮ್, ಸಿ.ಜಯರಾಮು, ಎಚ್.ಜಿ. ಭೋಜಣ್ಣ,ರಂಗನಾಥ್ ಇತರರು ಹಾಜರಿದ್ದರು.