ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೊಲೀಸರ 'ಜೂಟ್‌' ಆಟ

Mainashree
Updated On : 13 Mar 2013, 12:35 pm

 ವಿಶೇಷ ವರದಿ
ಬೆಂಗಳೂರು: ಬೆಂಗಳೂರು ನಗರ ಸಂಚಾರ ಪೊಲೀಸರದ್ದು ಪ್ರಯಾಣಿಕರ ಜತೆ 'ಟಾಮ್ ಆಂಡ್ ಜೆರ್ರಿ' ಆಟ...!
ವಾಹನ ಸವಾರರು ನಿಯಮ ಉಲ್ಲಂಘಿಸದಂತೆ ನಿಗಾ ವಹಿಸುವುದು, ಸಂಚಾರ ನಿಯಂತ್ರಣ ಮಾಡುವುದು ಅವರ ಕರ್ತವ್ಯ. ಆದರೆ ಸಂಚಾರ ಪೊಲೀಸರು ಈ ಕೆಲಸ ಮಾಡುತ್ತಿಲ್ಲ ಎಂದು ಬೆಂಗಳೂರು ನಗರದ ಕೆಲವು ಮರಗಳು ಹಾಗೂ ಕಟ್ಟಡಗಳ ನೆರಳುಗಳು ಸಾಕ್ಷಿ.
ರಸ್ತೆ ಬದಿಯಲ್ಲಿ ನಿಂತು ವಾಹನ ಸವಾರರಿಗೆ ತೊಂದರೆಯಾಗದಂತೆ, ನಿಯಮ ಉಲ್ಲಂಘಿಸದಂತೆ ಗಮನಿಸಬೇಕು. ಆದರೆ ಪೊಲೀಸರು ಮರದಡಿ, ಕಟ್ಟಡಗಳ ನೆರಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುವುದರ ಜತೆಗೆ ನಿಯಮ ಮೀರುವವರನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡುತ್ತಾರೆ.
ಪೊಲೀಸರು ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನಿಂತು ವಾಹನ ಸವಾರರ ಮೇಲೆ ಕಣ್ಣಿಡುವುದು ಕಡಿಮೆಯಾಗಿದೆ. ಪೊಲೀಸರು ರಸ್ತೆ ಬದಿಯಲ್ಲಿ ಕಾಣದಿದ್ದರೆ ಸಾರ್ವಜನಿಕರು ಸಿಗ್ನಲ್ ಜಂಪ್ ಮಾಡಿ ಅಡ್ಡಾದಿಡ್ಡಿ ಚಲಿಸುತ್ತಾರೆ. ಏಕಮುಖರಸ್ತೆಯಲ್ಲಿ ಸಂಚರಿಸುವುದು, ಹೆಲ್ಮೆಟ್ ಧರಿಸದೆ ಓಡಾಡುತ್ತಾರೆ. ಈ ರೀತಿ ಬರುವ ಪ್ರಯಾಣಿಕರನ್ನು ಟಾಮ್ ಆಂಡ್ ಜೆರ್ರಿ ಕಾರ್ಟೂನ್ ಮಾದರಿಯಲ್ಲಿ ಗಕ್ಕನೆ ಹಿಡಿದು ದಂಡ ಹಾಕುವ ಕಲೆಯನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಕರಗತ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದರೂ ಪೊಲೀಸ್ ಇಲಾಖೆಗೆ ಮಾತ್ರ ಅನುಕೂಲ. ಅತಿಹೆಚ್ಚು ದಂಡ ವಸೂಲಿ ಮಾಡಿದ ಹೆಗ್ಗಳಿಕೆ ಸಂಚಾರ ಪೊಲೀಸರಿಗೆ ಸೇರುತ್ತದೆ. ಆದ್ದರಿಂದ ಪೊಲೀಸರು ಇಂತಹ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ನಿಯಮ ಮೀರುವ ಸವಾರರು: ಪೊಲೀಸರು ಈಗಾಗಲೇ ತೆರೆಮರೆಯಲ್ಲಿ ನಿಂತು ಸಂಚಾರ ನಿಯಮಗಳನ್ನು ಮೀರುವವರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಕೆಲಸದ ನಡುವೆ ಬಿಡುವಿಗಾಗಿ ಮರದ ನೆರಳಿಗೆ ಮರೆಯಾಗುತ್ತಿದ್ದಾರೆ. ನೆಪಮಾತ್ರಕ್ಕೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ವಾಹನ ಸವಾರರು ಮನಸೋ ಇಚ್ಛೆ, ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿದೆ.  ವಾಹನ ತಪಾಸಣೆ ಹಾಗೂ ರಸ್ತೆ ಬದಿಯಲ್ಲಿ, ಸಿಗ್ನಲ್‌ಗಳಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಬದಲು ಸಂಚಾರ ಪೊಲೀಸ್ ಸಿಬ್ಬಂದಿ ಈ ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿದ್ದಾರೆ. ದಂಡ ವಸೂಲಿ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement