ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 13 Mar 2013, 12:34 pm

ಶಾಲಾ ಬಸ್ ಡಿಕ್ಕಿ: ವೃದ್ಧೆ ಸಾವು
ವಿಜಯಪುರ: ಪಟ್ಟಣದ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಬಾಲೇಪುರದಲ್ಲಿ ಶಾಲಾ ಬಸ್ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.  ದೇವನಹಳ್ಳಿಯ ಆಕ್ಸಫರ್ಡ್ ಶಾಲೆಯ ಮಕ್ಕಳ ಶಾಲಾ ವಾಹನ ಬಾಲೇಪುರದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸುಮಾರು  ವಯಸ್ಸಿನ ವೃದ್ಧ ಮಹಿಳೆ ತಿಮ್ಮಕ್ಕ (80) ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದೇಹವನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚನ್ನರಾಯಪಟ್ಟಣ ಪೊಲೀಸ್ ಠಾಣಾ ಎಸ್‌ಐ ಮಧುಕರ್ ತಿಳಿಸಿದ್ದಾರೆ.

ರಸ್ತೆ ಅಪಘಾತ: 15 ಜನರಿಗೆ ಗಾಯ
ವಿಜಯಪುರ: ಪಟ್ಟಣ ಸಮೀಪದ ದೇವನಹಳ್ಳಿ ರಸ್ತೆಯ ಕುರುಬರ ಕುಂಟೆ ಗೇಟ್ ಬಳಿ ಖಾಸಗಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಮತ್ತು ಬಸ್ ಪ್ರಯಾಣಿಕರು ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.
ವಿಜಯಪುರದಿಂದ ಬೆಂಗಳೂರಿಗೆ ಖಾಸಗಿ ಬಸ್ ಹೋಗುತ್ತಿದ್ದ ಸಂಧರ್ಭದಲ್ಲಿ  ಎದುರು ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಯಿಂದ ಲಾರಿ ಮತ್ತು ಬಸ್ ಚಾಲಕ ಸೇರಿದಂತೆ 15 ಪ್ರಯಾಣಿಕರಿಗೆ ತೀವ್ರ ಸ್ವರೂಪ ಗಾಯಗಳಾಗಿವೆ. ಗಾಯಾಳುಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಸಾರ್ವಜನಿಕರ ಸಹಾಯದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತು. ವಿಜಯಪುರ ಪೊಲೀಸ್ ಠಾಣೆಯ ಎಸ್‌ಐ ಸಂದೀಪ್‌ಕೌರಿ ಮತ್ತು ಯಶವಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತ: ಇಬ್ಬರಿಗೆ ಗಾಯ
ಸೂಲಿಬೆಲೆ: ಇಲ್ಲಿಗೆ ಸಮೀಪದ ಬೆಂಡಿಗಾನಹಳ್ಳಿ ಗ್ರಾಮದ ಕೆರೆಯ ತಿರುವಿನಲ್ಲಿ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಸೂಲಿಬೆಲೆ ನಿವಾಸಿಗಳಾದ ಕಾಂತರಾಜು ಮತ್ತು ನಾರಾಯಣಮ್ಮ ಗಾಯಗೊಂಡಿದ್ದು,ಚಿಕಿತ್ಸೆಗಾಗಿ  ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೂಲಿಬೆಲೆ ಜಂಗಮಕೋಟೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಬೆಂಡಿಗಾನಹಳ್ಳಿ ಗ್ರಾಮದ ಕೆರೆಯ ತಿರುವಿನಲ್ಲಿ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಕಾಂತರಾಜು ಕಾಲಿನ ಮೂಳೆ ಮುರಿದ್ದು,ನಾರಾಯಣಮ್ಮ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಾನೆ ಬೇರೆಡೆಗೆ: ಅರಣ್ಯಾಧಿಕಾರಿ
ಮಾಗಡಿ: ಸಾವನದುರ್ಗದಲ್ಲಿ ಬೀಡು ಬಿಟ್ಟಿದ್ದ ನಾಲ್ಕು ಕಾಡಾನೆಗಳನ್ನು ಬೇರೆಡೆಗೆ ಓಡಿಸಲಾಗಿದೆ, ಇನ್ನೊಂದು ಕಾಡಾನೆ ಮಾತ್ರ ಇಲ್ಲಿನ ಸಾವನದುರ್ಗದ ಕಾಡಿನಲ್ಲಿ ಓಡಾಡಿಕೊಂಡಿದೆ. ಅದನ್ನು ಸಹ ಓಡಿಸಲು ಈಗಾಗಲೇ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಎನ್. ಕೆಂಪರಾಜು ತಿಳಿಸಿದ್ದಾರೆ.    ಅವರು ಕಾಡಾನೆ ಕಾರ್ಯಾಚರಣೆ ವೇಳೆ ಮಾತನಾಡುತ್ತಾ ಕಾಡಾನೆಗಳನ್ನು ಸುರಕ್ಷಿತ ಸ್ಥಳಕ್ಕೆ ಓಡಿಸಲು ಕಾರ್ಯಾಚರಣೆ ನಡೆಸಲಾಗಿದೆ. ಕಾಡಾನಗಳಿಗೆ ಯಾವುದೇ ತೊಂದರೆಯಾಗದಂತೆ  ಪಟಾಕಿ ಸಿಡಿಸಿ ಓಡಿಸಲಾಗುತ್ತಿದೆ. ಅರಣ್ಯ ಅಂಚಿನಲ್ಲಿರುವ ರೈತರಿಗೆ ಒಂಟಿ ಕಾಡಾನೆ ಎಲ್ಲಿಯಾದರೂ  ಕಂಡು ಬಂದರೆ  ಕೂಡಲೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮನವಿ ಮಾಡಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಲಯ ಅರಣ್ಯಾಧಿಕಾರಿ ಕೆಂಪರಾಜು ಮೊ.9164077076 ಇವರನ್ನು ಸಂಪರ್ಕಿಸಬಹುದು. ಸಾವನದುರ್ಗ ಇತರೆ ಸುತ್ತಮುತ್ತ ಗ್ರಾಮೀಣ ಜನತೆ  ಕಾಡಾನೆಗಳ ಹಾವಳಿಯಿಂದ  ಭಯ ಭೀತರಾಗಿದ್ದರು.ರೈತರು ಬೆಳೆ ಕಳೆದು ಕೊಂಡು ಕಂಗಾಲಾಗಿದ್ದರು.

ಅಪಘಾತ: ವ್ಯಕ್ತಿಗೆ ಗಾಯ
ಮಾಗಡಿ: ಇಲ್ಲಿನ ಎನ್‌ಇಎಸ್ ಬಡಾವಣೆಯ ಗಾಂಧಿ ವೃತ್ತದ ಬಳಿ ಟಾಟೋ ಸುಮೋವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಯುವಕನೊಬ್ಬನ ಬಲಗಾಲು ಮುರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ತಿರುಮಲೆ ಶ್ರೀರಂಗನಾಥಸ್ವಾಮಿ ಬಡಾವಣೆ ವಾಸಿ ಟಿ.ಆರ್. ನಾಗರಾಜು ಎಂದು ಗುರುತಿಸಲಾಗಿದ್ದು, ಈತ ನಾಲ್ಕನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ. ಬಾಲಾಜಿ ಚಿತ್ರಮಂದಿರ ಬಳಿಯಿಂದ ದ್ವಿಚಕ್ರವಾಹನದಲ್ಲಿ ಮಂಗಳವಾರ ರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಮಾಗಡಿಯಿಂದ ಗುಡೇಮಾರನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಟಾಟೋ ಸುಮೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಗಾಯಾಳು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತ ನಡೆಸಿದ ಟಾಟೋ ಸುಮೋ ವಾಹನ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾರೆ.

ಬಿಜೆಪಿ ಹಿನ್ನಡೆಗೆ ಕೆಜೆಪಿ ಕಾರಣ: ದೊಡ್ಡಯ್ಯ
ಆನೇಕಲ್ಲು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯಾಗಲು ಕೆಜೆಪಿಯೇ ಕಾರಣ ಎಂಬುದು ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಆನೇಕಲ್ ಮೀಸಲು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಕೆಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಮುಖಂಡ ಆನೇಕಲ್ ದೊಡ್ಡಯ್ಯ ಹೇಳಿದ್ದಾರೆ.
ನಾವು ಗೆಲ್ಲದಿದ್ದರೂ ಬಿಜೆಪಿ ಗೆಲವಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement