15 ರಂದು ಅರಣ್ಯ ಇಲಾಖೆಗೆ ಮುತ್ತಿಗೆ
ಮಾಗಡಿ: ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಮಾ.15 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅರಣ್ಯ ಇಲಾಖೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದೆ ಎಂದು ಸಮಿತಿ ತಾಲೂಕು ಅಧ್ಯಕ್ಷ ಸಿ.ಆರ್. ನಾಗೇಶ್ ತಿಳಿಸಿದ್ದಾರೆ. ತಾಲೂಕಿನ ಬಡ ರೈತರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತು ಸುಳ್ಳು ಮೊಕದ್ದಮೆ ಹೂಡಿರುವುದನ್ನು ಖಂಡಿಸಿ ಮತ್ತು ಅರಣ್ಯ, ಬಗರ್ಹುಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ತಡೆಗಟ್ಟಬೇಕು. ರೈತರಿಗೆ ರಕ್ಷಣೆ ಮತ್ತು ಕಾಡಾನೆ ನಷ್ಟಕೊಳ್ಳಗಾಗಿರುವ ರೈತರಿಗೆ ಕನಿಷ್ಠ 25 ಸಾವಿರ ರು. ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.