ಜಿಪಂ ಕೆಡಿಪಿ ಸಭೆ
ರಾಮನಗರ: ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯು ಮಾ.18ರ ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮುದ್ದುರಾಜಜ್ಯಾದವ್ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮ ಯೋಜನೆಗಳ ಕುರಿತು ಪ್ರಗತಿ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ತಿಳಿಸಿದೆ.
ವೈದ್ಯಕೀಯ ಶಿಬಿರ
ಹೊಸಕೋಟೆ: ಪಟ್ಟಣದ ಎಂವಿಜಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಆಸ್ಪತ್ರೆಯಿಂದ ಡಾ.ಎಂ ವಿ ಜಯರಾಮನ್ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರವನ್ನು ಮಾ.31ರವರೆಗೆ ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಶಿಬಿರದಲ್ಲಿ ಆರೋಗ್ಯ ಸಲಹೆ, ಪ್ರಯೋಗಾಲಯದ ತಪಾಸಣೆಗಳು, ಕ್ಷ ಕಿರಣ ಮತ್ತು ಅಲ್ಟ್ರಾಸೌಂಡ್ ಚಿಕಿತ್ಸೆಗಳ ಉಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ.