'ಬಾಳೆ ಮಾರಾಟ, ಕೊಯ್ಲೋತ್ತರ ತಂತ್ರಜ್ಞಾನ'
ರಾಮನಗರ: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬಾಳೆ ಮಾರಾಟ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಕುರಿತು ವಿಚಾರ ಸಂಕಿರಣ ಹಾಗೂ ಬಾಳೆ ಕ್ಷೇತ್ರೋತ್ಸವ ಬದ್ಧತೆಯೇ ರೈತರ ಬದುಕಿನ ನಡುವೆ ಕಾರ್ಯಕ್ರಮವನ್ನು ಮಾ.16ರ ಬೆಳಗ್ಗೆ 11ಕ್ಕೆ ತಾಲೂಕಿನ ಬಿಡದಿ ಹೋಬಳಿಯ ಹೊಸೂರು ಗ್ರಾಮದ ರಾಜಣ್ಣನವರ ಬಾಳೆತೋಟದಲ್ಲಿ ನಡೆಯಲಿದೆ. ಶಾಸಕ ಎಚ್.ಸಿ ಬಾಲಕೃಷ್ಣ ಉದ್ಘಾಟಿಸುವರು. ಕಂಚುಗಾರನಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಚ್.ಸಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು.