ಜಿಪಂ ಅಧ್ಯಕ್ಷರಿಂದ ಗ್ರಾಮ ಸಂಚಾರ
ಮಾಗಡಿ: ಮತ್ತೀಕೆರೆ ಗ್ರಾಮ ಪಂಚಾಯ್ತಿ ವಾಪ್ತಿಯ ಚಿಟ್ಟನಹಳ್ಳಿ, ನೇರಳವಾಡಿ ಗ್ರಾಮಗಳಲ್ಲಿ ಅಧಿಕಾರಿಗಳೊಂದಿಗೆ ಗ್ರಾಮ ಸಂಚಾರ ನಡೆಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಗ್ರಾಮೀಣ ಭಾಗದ ಸಮಸ್ಯೆಯನ್ನು ಪರಿಶೀಲಿಸಿದರು. ಗ್ರಾಮಗಳಿಗೆ ಚರಂಡಿ, ರಸ್ತೆ, ಬೀದಿ ದೀಪ, ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷ ಕೆ.ಮುದ್ದರಾಜ ಯಾದವ್ ಅವರಲ್ಲಿ ಗ್ರಾಮೀಣ ಜನತೆ ಮನವಿ ಮಾಡಿಕೊಂಡರು. ಗ್ರಾಮ ಸಂಚಾರ ನಡೆಸಿ ಪರಿಶೀಲಿಸಿದ ನಂತರ ಜನತೆಯ ಮನವಿ ಸ್ಪಂದಿಸಿದ ಜಿ.ಪಂ. ಅಧ್ಯಕ್ಷರು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಇಲ್ಲಿನ ಜನತೆ ಹೆಚ್ಚು ಸಹಕಾರ ನೀಡಬೇಕು. ಗ್ರಾಮದ ಅಭಿವೃದ್ಧಿಗೆ ಹಣ ಕೊಡುತ್ತೇವೆ, ಸಮರ್ಪಕವಾಗಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇದಕ್ಕೆಲ್ಲ ನಿಮ್ಮೆಲ್ಲರ ಸಹಕಾರ ಬಹಳ ಅಗತ್ಯವಿದೆ ಎಂದರು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಮಸ್ಯೆಗಳೇನಾದರೂ ಇದ್ದರೆ ಕೂಡಲೆ ನನ್ನ ಗಮನಕ್ಕೆ ತಂದು ಸಮಸ್ಯೆ ಇತ್ಯಾರ್ಥಪಡಿಸಿಕೊಳ್ಳಬೇಕು. ವೈಯಕ್ತಿ ದ್ವೇಷ ಬಿಡಬೇಕು. ಗ್ರಾಮಾಭಿವೃದ್ಧಿಗೆ ಎಲ್ಲರು ಸಹಕರಿಸುವಂತೆ ಕೋರಿದರು. ಮತ್ತೀಕೆರೆ ಗ್ರಾಮದ ತಮ್ಮಯ್ಯ, ಶಿವಣ್ಣ, ಮೂರ್ತಿ, ನಾಗಯ್ಯ, ಶಿವಕುಮಾರ್, ಜಯಣ್ಣ ಕೃಷ್ಣ, ಎಂಜಿನಿಯರ್ ಮಹೇಶ್ ಇತರರು ಇದ್ದರು.