ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಮಾಜಿಕ ಸಮತೋಲನಕ್ಕೆ ಆಧ್ಯಾತ್ಮ ಸಹಕಾರಿ: ತಾರಾಮಣಿ

Rashmi Kasaragodu
Updated On : 18 Mar 2013, 12:55 pm

ಕ.ಪ್ರ. ವಾರ್ತೆ   ಹೊಸಕೋಟೆ   ಮಾ.17
ಸಮಾಜದಲ್ಲಿ ಸಮತೋಲನ ಉಂಟಾಗಿ ಶಾಂತಿ, ನೆಮ್ಮದಿಯ ಜೀವನ ಸಾಗಿಸಲು ಆಧ್ಯಾತ್ಮಿಕ ಜ್ಞಾನ ಸಹಕಾರಿಯಾಗಿದೆ ಎಂದು ಬ್ರಹ್ಮಕುಮಾರಿ ತಾರಾಮಣಿ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ 77 ನೇ ಶಿವಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆಯು 1936 ರಲ್ಲಿ ಪ್ರಾರಂಭಗೊಂಡಿದ್ದು ಇಂದು ವಿಶ್ವಾದ್ಯಂತ 180 ರಾಷ್ಟ್ರಗಳಲ್ಲಿ ಸುಮಾರು 8500 ಶಾಖೆಗಳನ್ನು ಹೊಂದಿದ್ದು ಶಾಂತಿ ಸ್ಥಾಪನೆ ಪ್ರಮುಖ ಉದ್ದೇಶವಾಗಿದೆ. ಈ ಕಾರಣದಿಂದ ವಿಶ್ವಸಂಸ್ಥೆ ಸಲಹಾ ಸಮಿತಿಯ ಸದಸ್ಯತ್ವ ಸಹ ಪಡೆದುಕೊಂಡಿದೆ. ಪಟ್ಟಣದಲ್ಲಿ 12 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಸ್ಥೆಯು ನೂರಾರು ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಲ್.ನಾಗರಾಜ್, ವಿವೇಕಾನಂದ ಯೋಗ ಶಿಕ್ಷಣ ಸಮಿತಿಯ ಶಿಕ್ಷಕ ಹರಿನಾರಾಯಣ್, ಬಿ. ನಟರಾಜ್ ಮತ್ತಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement