ಕಳವು ಮಾಡುತ್ತಿದ್ದ ಮಹಿಳೆ ಬಂಧನ
ಚನ್ನಪಟ್ಟಣ: ಮದುವೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಇಲ್ಲಿನ ಸಾಯಿಮಂದಿರದಲ್ಲಿ ಭಾನುವಾರ ನಡೆದಿದೆ. ಮೈಸೂರು ಮೂಲದ ಅಣ್ಣಮ್ಮ ಬಂಧನಕ್ಕೆ ಒಳಗಾಗಿರುವ ಮಹಿಳೆ ಮದುವೆ ಸಮಾರಂಭಕ್ಕೆ ಅತಿಥಿಯ ಸೋಗಿನಲ್ಲಿ ಆಗಮಿಸಿದ್ದ ಈಕೆ ವೃದ್ಧೆಯೊಬ್ಬರು ಹಾಕಿಕೊಂಡು ಬಂದಿದ್ದ ಎಳೆ ಚಿನ್ನದ ಸರವನ್ನು ಕಳವು ಮಾಡುವಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿದೆ.
ಅಪಘಾತ: ಬೈಕ್ ಸವಾರ ಸಾವು
ಚನ್ನಪಟ್ಟಣ: ದ್ವಿಚಕ್ರವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸೋಮುವಾರ ನಡೆದಿದೆ.
ಬೆಂಗಳೂರಿನ ವೈಟ್‌ಪೀಲ್ಡ್ ವಾಸಿ ಮುರುಳಿ(23) ಮೃತ ವ್ಯಕ್ತಿಯಾಗಿದ್ದು, ಭಾನುವಾರ ತಾಲೂಕಿನ ದೊಡ್ಡಮಳೂರು ಬಳಿ ಬೈಕ್‌ನಲ್ಲಿ ಬರುತ್ತಿದ್ದ ಈತನಿಗೆ ಮತ್ತೊಂದು ದ್ವಿಚಕ್ರವಾಹನ ಎದುರಿನಿಂದ ಬಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಈತನನ್ನು ನಿಮಾನ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ವಿಫಲಗೊಂಡು ಸೋಮುವಾರ ಈತ ಕೊನೆಯುಸಿರೆಳೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.