ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಆಧುನಿಕ ಬೇಸಾಯದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ'

Mainashree
Updated On : 21 Mar 2013, 10:22 am

ಕ.ಪ್ರ ವಾರ್ತೆ ಮಾಗಡಿ ಮಾ.20
ತೋಟಗಾರಿಕೆಯಲ್ಲಿ ತಾಂತ್ರಿಕ ಬೇಸಾಯ ಪದ್ದತಿಯಿಂದ ರೈತರ ಆರ್ಥಿಕ ಸುಧಾರಣೆ ಸಾಧ್ಯವಿದೆ ಎಂದು ಜಿಪಂ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ್ ಅಭಿಪ್ರಾಯಪಟ್ಟರು.     ಇಲ್ಲಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಆವರದಲ್ಲಿ ಬುಧವಾರ ತೆಂಗು ಬೇಸಾಯ ಯೋಜನೆಯಡಿ ತಿಪ್ಪಸಂದ್ರ  ಹೋಬಳಿ ಪಲಾನುಭವಿಗಳಿಗೆ ಹಸರೆಲೆ ಗೊಬ್ಬರದ ಬೀಜ(ಡಯಂಚ) ಮತ್ತು ಮಾಡಬಾಳ್ ಹೋಬಳಿ ಪಲಾನಭವಿಗಳಿಗೆ   ಉಜಿ ನೋಣ ನಿಯಂತ್ರಣ ಸಾಮಗ್ರಿ ವಿತರಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡುವ ತಾಂತ್ರಿಕ ಬೇಸಾಯ ಪದ್ಧತಿಯನ್ನು ರೈತರು ತಮ್ಮ ತೋಟಗಳಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು. ತಾಲೂಕಿನಲ್ಲಿ ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನೀರನ್ನು ಪೋಲು ಮಾಡದೆ ತಮ್ಮ ತೋಟಗಳಿಗೆ ಬಳಸಿಕೊಳ್ಳಬೇಕು. ಹನಿ ನೀರಾವರಿ ಯೋಜನೆ ಸಹಾಯಧನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತೋಟಗಾರಿಕೆಯಲ್ಲಿ ಹನಿ ನೀರಾವರಿ  ಅಳವಡಿಸಿಕೊಂಡು ಫಸಲನ್ನು ಬೆಳೆಯಬೇಕು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಜಿಪಂ ಸದಸ್ಯ ಎಂ.ಕೆ.ಧನಂಜಯ, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್ ಮತ್ತಿತರರು ಮಾತನಾಡಿದರು. ಹಿರಿಯ ಸಹಾಯಕ ನಿರ್ದೇಶಕಿ ಕೆ.ಎನ್.ರೂಪಶ್ರೀ ಇಲಾಖೆಯ ಯೋಜನೆಗಳ ಸೌಲತ್ತುಗಳ ಕುರಿತು ಮಾಹಿತಿ ನೀಡಿದರು.    ತಾ.ಪಂ. ಸದಸ್ಯೆ ಅರುಂಧತಿ ಚಿಕ್ಕಣ್ಣ, ರೈತ ಮುಖಂಡ ವೀರಭದ್ರಪ್ಪ, ರಾಮಕೃಷ್ಣಯ್ಯ, ಚಂದ್ರಪ್ಪ, ತೋಟಗಾರಿಕೆ ಅಧಿಕಾರಿಗಳಾದ ಮಂಜುನಾಥ್, ವಸಂತ, ಶಿವಣ್ಣ ಮತ್ತಿತರುರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement