ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ'

Mainashree
Updated On : 21 Mar 2013, 10:22 am

ಕ.ಪ್ರ ವಾರ್ತೆ ನೆಲಮಂಗಲ ಮಾ.20
ಪ್ರತಿಯೊಬ್ಬ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್‌ರೋಕುಮ ಪಚಾವೊ ಹೇಳಿದರು.
ಅವರು ಪಟ್ಟಣದ ಥಾಮಸ್ ಮೆಮೊರಿಯಲ್ ಆಂಗ್ಲ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ  ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಮಾಜದ ನಾಯಕರಾಗಬೇಕು. ದೇಶ ಮತ್ತು ರಾಜ್ಯವು ಮೆಚ್ಚುವಂತಹ ಸಮಾಜ ಮುಖಿ ಕಾರ್ಯಗಳನ್ನು ನಿರ್ವಹಿಸಬೇಕು. ಉತ್ತಮ ನಡತೆ ಹೊಂದುವ ಮೂಲಕ ಸಮಾಜವನ್ನು ಸನ್ನಡತೆ ತರಬೇಕು ಎಂದರು.
ಶಾಲಾ ಸಂಸ್ಥಾಪಕಿ ಜೋಸ್ನಾಫ್ರಾನ್ಸಿಸ್  ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಸದಸ್ಯ ಸನಾವುಲ್ಲಾ, ಅರಿಶಿನಕುಂಟೆ ಗ್ರಾ.ಪಂ.ಉಪಾಧ್ಯಕ್ಷ ಕೆಂಪರಾಜು, ಮುಖಂಡರಾದ ರವಿ, ಕೃಷ್ಣಪರ್ಪ, ಶಿವಕುಮಾರ್, ಶಾಲಾ ಮುಖ್ಯಸ್ಥ ಸಿರಿಲ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement