ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೋಷಕರು ಸರ್ಕಾರಿ ಶಾಲೆ ಕೀಳರಿಮೆ ತೊರೆಯಲಿ: ಎ.ಜನಾರ್ದನ ರೆಡ್ಡಿ

Mainashree
Updated On : 21 Mar 2013, 10:21 am

ಸೂಲಿಬೆಲೆ: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಇರುವ ಕೀಳರಿಮೆ ಹೋಗಲಾಡಿಸಿ ಶಾಲೆಯ ವಾತಾವರಣವನ್ನು ಖಾಸಗಿ ಶಾಲೆಗಳಂತೆ ಮಾರ್ಪಡಿಸಲು ಟೌನ್ ಸರ್ಕಾರಿ ಶಾಲೆಯ ಮಕ್ಕಳಿಗೆ 400 ಸಮವಸ್ತ್ರ ಉಚಿತವಾಗಿ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಶಿರಡಿ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ.ಜನಾರ್ದನ ರೆಡ್ಡಿ ಭರವಸೆ ನೀಡಿದ್ದಾರೆ ಸೂಲಿಬೆಲೆ ಟೌನ್ ರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಖಾಸಗಿ ಶಾಲೆಗಳಿಗಿಂತ ಕನ್ನಡ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿ ಸಾಧಿಸಿದ್ದಾರೆ.
ಹೆಚ್ಚಿನ ಶೈಕ್ಷಣಿಕ ಅರ್ಹತೆಯಿರುವ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮನೋಭಾವ ಪೋಷಕರು ಬೆಳೆಸಿಕೊಳ್ಳಬೇಕು.ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಮುಖ್ಯ ಶಿಕ್ಷಕಿ ಓಂಕಾರಮ್ಮ ಮಾತನಾಡಿ, ಗುರಿಯನ್ನು ಹೊಂದಿರುವ ವಿದ್ಯಾರ್ಥಿ ಸಾಧನೆಯ ಮೆಟ್ಟಲು ಹತ್ತಲು ಸಾಧ್ಯ. ಈ ನಿಟ್ಟಿನಲ್ಲಿ ಉತ್ತಮವಾಗಿ ಕಲಿತು ಶಾಲೆಗೂ, ಗ್ರಾಮಕ್ಕೂ ಹೆಸರು ತನ್ನಿ ಎಂದರು. ಮುನಿಶಾಮಯ್ಯ, ಎಸ್.ವೈ ನಾಗರಾಜ್ ಮತ್ತಿತರರು ಮಾತನಾಡಿದರು.  ಶ್ರೀನಿವಾಸ್,ಉಮೇಶ್ ಗೌರವಿಸಲಾಯಿತು. ಆಶ್ವತ್ಥ್, ಶಾರದ ಹೆಗಡೆ, ಕಲಾ, ಮಲ್ಲಿಕಾ, ಅಂಬುಜಾ, ಮಲ್ಲಿಕಾ, ಸುಕನ್ಯ, ಮಂಜುಳಾ, ಕನಕಲತಾ, ಗಿರಿಜ, ಶೈಲಜಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement