ಪೌರಾಣಿಕ ನಾಟಕೋತ್ಸವ ಸಮಾರೋಪ
ದೇವನಹಳ್ಳಿ: ಇಲ್ಲಿನ ಶ್ರೀ ಶಕ್ತಿ ಕನ್ನಡ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಮಾಜಿ ಪುರಸಭಾಧ್ಯಕ್ಷ ದಿವಂಗತ ಎಸ್.ರಾಮಯ್ಯರವರು ಸ್ವರಣಾರ್ಥ ಕಳೆದ ಒಂದು ವಾರದಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪೌರಾಣಿಕ ನಾಟಕಗಳ ಸಪ್ತಾಹ ಆಯೋಜಿಸಿದ್ದು ಮಂಗಳವಾರ ಸಂಜೆ ಸಮಾರೋಪ ಅಂಗವಾಗಿ ವಿಜಯಪುರ ಶ್ರೀ ವೇಣುಗೋಪಾಲಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯವರಿಂದ ಎಂೆ.ವಿ.ನಾಯಿಡು ರವರ ನಿರ್ದೇಶನದಲ್ಲಿ ಸಾಮ್ರಾಟ್ ಸುಯೋಧನ ನಾಟಕ ಪ್ರದರ್ಶನಗೊಂಡಿತು.
ಮಾಜಿ ಶಾಸಕರಾದ ಡಿ.ಎಸ್.ಗೌಡ, ಮುನಿನರಂಸಿಂಹಯ್ಯ ಮತ್ತಿತರರು ಮಾತನಾಡಿದರು. ಇದೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಯಲಿಯೂರು ಡಿ.ರಾಮಾಂಜಿನಪ್ಪ, ವಿ.ಎಂ.ನಾಯಿಡು ಹಾಗೂ ಟಿ.ಎಂ.ಮುನಿಶಾಮಪ್ಪ ಇವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಎಲ್.ರವೀಂದ್ರ, ಆರ್.ಮಾರೇಗೌಡ, ಎಸ್.ಪಿ.ಗಾಂಧಿ, ಕೆಂಪೇಗೌಡ, ಸಂಘದ ಅಧ್ಯಕ್ಷ ಕೆ.ಸುಬ್ರಮಣಿ, ಹೆಚ್.ಎಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.