ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

13ಆರೋಪಿಗಳ ವಿರುದ್ಧ ಪ್ರಕರಣ ಕೈಬಿಡಲು ಹೈಕೋರ್ಟ್ ನಕಾರ

Parashurama
Updated On : 22 Mar 2013, 12:20 pm

ಕ.ಪ್ರ.ವಾರ್ತೆ ಬೆಂಗಳೂರು ಮಾ.21
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ ಹೆಸರಿಗೆ ಮಸಿ ಬಳಿಯಲು ನಕಲಿ ಸೀಡಿ ಸೃಷ್ಟಿಸಿದ್ದ ಗೋಕರ್ಣದ 13 ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರದ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ 13 ಆರೋಪಿಗಳು ಪಿತೂರಿ ನಡೆಸಿದ್ದು ತನಿಖೆ ಸಂದರ್ಭದಲ್ಲಿ ಸಾಬೀತಾಗಿದೆ.
ಶ್ರೀಗಳ ಭಾವಚಿತ್ರವನ್ನು ನಕಲಿ ಮಾಡಿ ಸೀಡಿ ಮೂಲಕ ಸಾರ್ವಜನಿಕರಿಗೆ ಹಂಚುವ ಪ್ರಕ್ರಿಯೆಯಲ್ಲಿ ಇವರು ನಿರತರಾಗಿದ್ದರ ಜೊತೆಗೆ ಲಕ್ಷಾಂತರ ಭಕ್ತರ ಮನಸ್ಸಿಗೆ ಇವರು ಘಾಸಿಯುಂಟು ಮಾಡಿರುವುದು ತನಿಖೆ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ನ್ಯಾ. ಎನ್.ಆನಂದ್ ಆದೇಶ ನೀಡಿದ್ದಾರೆ. ಶ್ರೀಗಳ ಚಿತ್ರಗಳನ್ನು ಸಾಫ್ಟ್‌ವೇರ್‌ಗಳ ಮೂಲಕ ಬದಲಾಯಿಸಲಾಗಿದೆ. ಇದನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ನೀಡಿ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಈ ಸಂಬಂಧ ತನಿಖಾಧಿಕಾರಿಯು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇದಕ್ಕೆ ಸಂಬಧಿಸಿದ ಭಿತ್ತಿಪತ್ರ ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ಆರೋಪಗಳಿಂದ ವಶಪಡಿಸಿಕೊಂಡಿರುವುದು ತನಿಖೆ ಮೂಲಕ ಗಮನಕ್ಕೆ ಬಂದಿದೆ.
ಈ ಹಂತದಲ್ಲಿ ಪ್ರಕರಣವನ್ನು ಕೈಬಿಡಲು ಸಾಧ್ಯವಿಲ್ಲ. ತನಿಖೆಯ ಪೂರಕ ಅಂಶಗಳನ್ನು ಕೋರ್ಟ್ ಒಪ್ಪಲೇಬೇಕಾಗುತ್ತದೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧದ ಎಫ್‌ಐಆರ್ ಅಥವಾ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಆರೋಪಿಗಳಾದ ಗೋಕರ್ಣದ ನಿವಾಸಿಗಳಾದ ಬಾಲಚಂದ್ರ ಕೊಡ್ಲೆಕೇರೆ, ಗಜಾನನ ದಿಕ್ಷಿತ್, ಶಿವರಾಮ್ ಅಡಿ, ಗಣೇಶ್ ಜೋಗಳೇಕರ್, ಮನೋಹರ್ ನಾವಡಾ, ರಾಜಗೋಪಾಲ್ ಅಢಿ, ನಿರಂಜನ್ ಜೋಶಿ, ಸೋಮನಾತ್ ಜೋಗಳೇಕರ್, ಫಣಿರಾಜ್ ಗೋಪಿ, ಕೃಷ್ಣ ಭಟ್‌ನೀಲಕಂಠ ಜೋಗಳೇಕರ್, ವಿಶ್ವನಾಥ್ ಗೋಪಿ ಹಾಗೂ ಪ್ರಸನ್ನ ಭಟ್ ಅವರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments