24ಕ್ಕೆ ಸೂಲಿಬೆಲೆಯಲ್ಲಿ ವಿವೇಕ ಉತ್ಸವ
ಸೂಲಿಬೆಲೆ: ಇಲ್ಲಿನ ಪರಮಹಂಸ ನಿಲಯದ ಆವರಣದಲ್ಲಿ ಮಾ.24ಕ್ಕೆ ಐತಿಹಾಸಿಕ ವಿವೇಕ ಉತ್ಸವ ಸಮಾರಂಭವನ್ನು ಹಮ್ಮಿಕೊಂಡಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ. ಸೂಲಿಬೆಲೆ ಬಸ್ ನಿಲ್ದಾಣದಲ್ಲಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪನೆ ಮಾಡಲು ಕೆಲ ತಿಂಗಳಿಂದ ಯೋಜಿಸಲಾಗಿತ್ತು.ಇದಕ್ಕೆ ಗುಂಪೊಂದು ಅಡ್ಡಿಪಡಿಸಿದ ಕಾರಣ ಪರಮ ಹಂಸ ನಿಲಯದಲ್ಲಿ 14 ಅಡಿ ವಿವೇಕಾನಂದರ ಪ್ರತಿಮೆ ಸ್ಥಾಪನೆಗೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯವನ್ನು ವಿವೇಕ ಉತ್ಸವ ಹೆಸರನಲ್ಲಿ ಆಯೋಜಿಸಲಾಗಿದ್ದು, ಗ್ರಾಮದೆಲ್ಲಡೆ ಕೇಸರ ಧ್ವಜಗಳ ರಾರಾಜಿಸುತ್ತಿವೆ. ಮಾ.24ರ ಬೆ.10ಕ್ಕೆ ಸಂತ ಸಮಾಜ ಸಮಾಗಮ ಸಮಾರಂಭ ನಡೆಯಲಿದ್ದು, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿ, ಬಸನಗುಡಿ ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದಜೀ ಮಹರಾಜ್, ಸುತ್ತೂರು ಕ್ಷೇತ್ರ ಜಗದ್ಗುರ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದಜಿ ಮಹಾಸ್ವಾಮಿ ಸೇರಿದಂತೆ ಅನೇಕ ಸಾಧುಗಳು ಭಾಗವಹಿಸಲಿದ್ದಾರೆ. ತರುಣ ಸಮಾವೇಶ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್ ಗೌಡ ವಹಿಸಲಿದ್ದಾರೆ. ಆಕರ್ಷಕ ರಥಯಾತ್ರೆ, ವಿವೇಕಾನಂದ ಯೂಥ್ ಕ್ಲಬ್ ಉದ್ಘಾಟನೆ ನಡೆಯಲಿದೆ. 14 ಅಡಿ ವಿವೇಕಾನಂದರ ಪ್ರತಿಮೆ ಲೋಕಾರ್ಪಣಿ ನಡೆಯಲಿದೆ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದ ಮುಖ್ಯ ರೂವಾರಿಗಳಾಗಿದ್ದು, ಸೂಲಿಬೆಲೆಯ ಯುವ ಸಮೂಹ ಕಾರ್ಯಕ್ರಮದ ನೇತೃತ್ವ ವಹಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.