ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಶಿವಾಜಿ ಜಯಂತಿ

Parashurama
Updated On : 21 Mar 2013, 11:48 am

ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾ. 22ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತಿದೆ. ಬೆಳಗ್ಗೆ 10ಕ್ಕೆ ಜಾನಪದ ಕಲಾ ತಂಡಗಳೊಂದಿಗೆ ನಗರದ ವಾಟರ್ ಟ್ಯಾಂಕ್ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಶಿವಾಜಿ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಗುವುದು.
ರೇಣುಕಾಚಾರ್ಯ ಜಯಂತಿ 25ಕ್ಕೆ
ನೆಲಮಂಗಲ: ಪಟ್ಟಣದ  ಅರಳೇಪೇಟೆಯ ಬಸವೇಶ್ವರ ಯುವಕ ಸಮಿತಿ ವತಿಯಿಂದ ಮಾ. 25ರ ಸೋಮವಾರದಂದು   ಜಗದ್ಗುರು ರೇಣುಕಾಚಾರ್ಯ ಜಯಂತಿ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಮತ್ತು  ಬೆಳಿಗ್ಗೆ ಶ್ರೀ ಕ್ಷೇತ್ರನಾಥ  ಬಸವೇಶ್ವರಸ್ವಾಮಿ  ಜಗದ್ಗುರು ರೇಣುಕಾಚಾರ್ಯರು ಹಾಗೂ ಗಣೇಶನಿಗೆ ರುದ್ರಾಭಿಷೇಕವನ್ನು  ಮಾಡಲಾಗುವುದು. ಸಂಜೆ 4-00 ಗಂಟೆಯಿಂದ ಪಟ್ಟಣದ ರಾಜಬೀದಿಗಳಲ್ಲಿ  ಜಗದ್ಗುರು ರೇಣುಕಾಚಾರ್ಯಮೂರ್ತಿ ಉತ್ಸವವನ್ನು  ನಡೆಸಲಾಗುವುದು.
ದೇವಾಲಯ ಜೀರ್ಣೋದ್ಧಾರ
ಮಾಗಡಿ: ಮಾಗಡಿ ಪಟ್ಟಣದ ಚಾರಿತ್ರಿಕ ಶ್ರೀ  ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸುವುದಾಗಿ  ಟ್ರಸ್ಟ್ ಅಧ್ಯಕ್ಷೆ ಶಾರದ ಸುರೇಶ್ ತಿಳಿಸಿದರು. ಅವರು ಇಲ್ಲಿನ  ದೇವಾಲಯದ ಜೀರ್ಣೋದ್ಧಾರಕ್ಕೆ  ಆನೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ  ವಿವಿಧ ಧಾರ್ಮಿಕ ಪೂಜೆ ಕೈಂಕರ್ಯ ನೆರವೇರಿಸಿದರು. ವಕೀಲ ಸುರೇಶ್, ಎಂ.ಗೋಪಾಲ್, ಮೂರ್ತಿ, ನಾಗರಾಜು, ಮಹೇಶ್, ನಟರಾಜು ಇದ್ದರು.  
ಈಜಲು ಹೋಗಿ ವಿದ್ಯಾರ್ಥಿ ಸಾವು
ರಾಮನಗರ: ಔತಣ ಕೂಟದಲ್ಲಿ ಊಟ ಮುಗಿಸಿ ಈಜಲು ಹೋದ ಕಾಲೇಜು ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗವಿಕೆರೆಯಲ್ಲಿ ಬುಧವಾರ ಸಂಭವಿಸಿದೆ. ಬೆಂಗಳೂರು ಸಮೀಪದ ಜೈನ್ ಕಾಲೇಜಿನ ಮೊದಲ ವರ್ಷದ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದ ರಿಜ್ವಾನ್(20) ಮೃತ  ವಿದ್ಯಾರ್ಥಿ. ಆತ ಸ್ನೇಹಿತರೊಬ್ಬರು ಆಯೋಜಿಸಿದ್ದ ಔತಣಕೂಟಕ್ಕಾಗಿ ಕನಕಪುರಕ್ಕೆ ಆಗಮಿಸಿ, ಊಟದ ಬಳಿಕ ಸಹಪಾಠಿಗಳೊಂದಿಗೆ ಈಜಲು ಕೆರೆಗೆ ಇಳಿದಿದ್ದ. ಜೈನ್ ಕಾಲೇಜು ವಿದ್ಯಾರ್ಥಿಯ ಕುಟುಂಬ ಸದಸ್ಯರೊಬ್ಬರು ಪುರಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿ ತನ್ನ ಸಹಪಾಠಿಗಳಿಗೆ ಔತಣಕೂಟ ಆಯೋಜಿಸಿದ್ದ. ಸುಮಾರು 40 ಮಂದಿ ಆಗಮಿಸಿದ್ದರು.  ಊಟ ಮುಗಿಸಿದ ತರುವಾಯ 30 ಮಂದಿ ನಿರ್ಗಮಿಸಿದ್ದರು. ಉಳಿದವರು ಊಟವಾದ ನಂತರ ಕೆರೆ ಬಳಿ ತೆರೆಳಿದ್ದರು. ಅಲ್ಲಿ ಕೆಲವರು ಈಜಲು ಕೆರೆಗೆ ಇಳಿದಿದ್ದು, ರಿಜ್ವಾನ್ ನೀರಿನಲ್ಲಿ ಮುಳುಗಿದ್ದಾನೆ. ತಡರಾತ್ರಿವರೆಗೂ ಶವ ಪತ್ತೆಯಾಗಿಲ್ಲ. ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments