'ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾಗುವ ಪುಣ್ಯದ ಕೆಲಸ'
ರಾಮನಗರ: ದಾನಗಳಲ್ಲೇ ನೇತ್ರ ದಾನ ಮಹಾಶ್ರೇಷ್ಠ. ಮರಣಾನಂತರ ಕಣ್ಣುಗಳನ್ನು ದಾನ ಮಾಡಿದರೆ ಅಂಧರ ಬಾಳಿಗೆ ಬೆಳಕಾಗುವ ಪುಣ್ಯದ ಕೆಲಸ ನಮ್ಮದಾಗುತ್ತದೆ ಎಂದು ಚನ್ನಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಸ್. ಇಂದುಶೇಖರ್ ಹೇಳಿದರು.
ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಬೆಂಗಳೂರಿನ ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ತರಬೇತಿ ಶಾಲೆಯ ಅಧಿಕಾರಿ, ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗಾಗಿ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮರಣಾನಂತರ ಮೃತ ದೇಹದೊಂದಿಗೆ ನಮ್ಮ ಕಣ್ಣುಗಳು ಮಣ್ಣಾಗುವ ಬದಲು ಅಂಧರಿಗೆ ದೃಷ್ಟಿ ನೀಡುವಂತಾಗಬೇಕು. ಕಣ್ಣುಗಳನ್ನು ದಾನ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ನೇತ್ರ ಬ್ಯಾಂಕ್ಗಳಿಗೆ ತೆರಳಿ, ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಣ್ಣಿನ ಆಯಾಸದಿಂದ ತಲೆನೋವು, ಕಣ್ಣು ಒಣಗುವುದು, ಕಣ್ಣು ಉರಿ, ಆತಂಕವಿದೆ ಎಂದು ಎಚ್ಚರಿಸಿದರು.
ಡಿವೈಎಸ್ಪಿ ಶಿವರಾಜ್, ನಿರೀಕ್ಷಕರಾದ ನಾಗರಾಜ್, ರಮೇಶ್, ಜಯರಾಮ್, ರಾಜಶೇಖರ್, ಪ್ರಶಿಕ್ಷಣಾರ್ಥಿಗಳು, ಪೊಲೀಸ್ ಕುಟುಂಬದವರು ಮತ್ತಿತರರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.