ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಪೌರಾಣಿಕ ನಾಟಕಗಳು ಗ್ರಾಮೀಣರ ಜೀವಾಳ'

Parashurama
Updated On : 21 Mar 2013, 11:48 am

ಕ.ಪ್ರ.ವಾರ್ತೆ ಆನೇಕಲ್ಲು ಮಾ.21
ಸುಗ್ಗಿ ಕಾಲ ಮುಗಿದ ಮೇಲೆ ರೈತರು ತಮ್ಮಲ್ಲಿ ಹುದುಗಿರುವ ಕಲಾ ಕೌಶಲ್ಯ ಪ್ರದರ್ಶನಕ್ಕೆ ಪೌರಣಿಕ ನಾಟಕಗಳನ್ನು ಆಯ್ದುಕೊಂದು ಇಡೀ ರಾತ್ರಿ ಪ್ರದರ್ಶಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮೆರೆಯುತ್ತಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಟಿ. ಶ್ರೀನಾಥರೆಡ್ಡಿ ತಿಳಿಸಿದ್ದಾರೆ.
ಅವರು ತಾಲೂಕಿನ ಸಬ್‌ಮಂಗಲದಲ್ಲಿ ಶ್ರೀ ಮಾರುತಿ ಕಲಾ ಯುವಕ ಸಂಘ ಏರ್ಪಡಿಸಿದ್ದ ಅಹೋರಾತ್ರಿ ಕುರುಕ್ಷೇತ್ರ ನಾಟಕ ವೀಕ್ಷಣೆ ಹಾಗೂ ಪುರಸಭಾ ಸದಸ್ಯ ಪದ್ಮನಾಭ ಅವರಿಗೆ ಸನ್ಮಾನ ನೀಡಿ ಮಾತನಾಡಿ  ಸಂಗೀತ ವಿದ್ಯೆಯ ವಿವಿಧ ಆಲಾಪನೆ, ನವರಸಗಳ ಪ್ರದರ್ಶನ ಹಾಗೂ ಅರ್ಥ ವಿವರಣೆ ಹೊಂದಿದ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ನುಡಿಯುವ ಮೂಲಕ ಕನ್ನಡಾಂಬೆಯ ಸೇವೆ ಸಲ್ಲಿಸುತ್ತಾರೆ ಎಂದರು.
ಸಮಂದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮಶೇಖರರೆಡ್ಡಿ ಮಾತನಾಡಿ ನೂರಾರು ಪೌರಾಣಿಕ ನಾಟಕಗಳಿಗೆ ಸಂಭಾಷಣೆ, ಹಿನ್ನೆಲೆ ಸಂಗೀತ, ವಾದನಗಳನ್ನು ನೀಡಿ ರಾಜ್ಯ ಹಾಗೂ ಅಂತರರಾಜ್ಯ ಖ್ಯಾತ ಕಲಾವಿದರಾಗಿದ್ದ ವಿದ್ವಾನ್ ಮಣಸಿಗನಹಳ್ಳಿ ಮಲ್ಲೇಶಾರಾಧ್ಯರು ಪ್ರಾತಃ ಸ್ಮರಣೀಯರಾಗಿದ್ದರು. ತಾಲೂಕಿನಲ್ಲಿ ಹಿರಿಯ ಕಲಾವಿದರು ಹತ್ತಾರು ಸಂಖ್ಯೆಯಲ್ಲಿದ್ದು ರಾಜ್ಯ ಸರ್ಕಾರ ಸೂಕ್ತ ಪ್ರಶಸ್ತಿ ನೀಡಿ ತನ್ನ ಗೌರವ ಹೆಚ್ಚಸಿಕೊಳ್ಳಬೇಕೆಂದರು. ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments