ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಂಟಿ ಮಹಿಳೆ ಕೊಲೆ: ಆರೋಪಿ ಬಂಧನ

Parashurama
Updated On : 26 Mar 2013, 12:34 pm

ಕ.ಪ್ರ. ವಾರ್ತೆ ಆನೇಕಲ್ ಮಾ.25
ಹಾಡ ಹಗಲೇ ಒಂಟಿ ಮಹಿಳೆಯನ್ನು ಇರಿದು ಕೊಂದು ನಗ ದೋಚಲು ಪ್ರಯತ್ನಿಸಿದ ಪಾತಕಿಯನ್ನು ಗ್ರಾಮಸ್ಥರೇ ಹಿಡಿದು ಹಿಗ್ಗಾ ಮುಗ್ಗ ಥಳಿಸಿ ಪೊಲೀಸರ  ವಶಕ್ಕೆ ನೀಡಿದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವರನ್ನು ಭ್ರಮರಾಂಬ (50) ಎನ್ನಲಾಗಿದ್ದು ಮೂಲತಃ ಆಂಧ್ರಪ್ರದೇಶದ  ಕುಪ್ಪಂನವರೆನ್ನಲಾಗಿದೆ. ಗಂಡ ನಾಯ್ಡು ಅವರು ಹೀಲಲಿಗೆಯಲ್ಲಿ ನೀರಿನ ಟ್ಯಾಂಕರ್ ವ್ಯಾಪಾರ ಮಾಡುತ್ತಿದ್ದು ಘಟನೆ ನಡೆದ ವೇಳೆ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಕೊಲೆ ಮಾಡಿದವನು ಹೀಲಲಿಗೆಯ ಶಂಕರ್ (19) ಎನ್ನಲಾಗಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ಶಂಕರ್ ತನ್ನ ಕಷ್ಟಕ್ಕೆ ನಾಯ್ಡು ಅವರಿಂದ 3000 ರು. ತೆಗೆದುಕೊಂಡಿದ್ದು ಹಣ ವಾಪಸ್ ಕೊಡುವ ನೆಪದಲ್ಲಿ ಮನೆ ಪ್ರವೇಶಿಸಿ ಅಗಳಿ ಹಾಕಿಕೊಂಡು ಭ್ರಮರಾಂಭ ಅವರನ್ನು ನಾಲ್ಕಾರು ಕಡೆ ಚೂರಿಯಿಂದ ಇರಿದಿದ್ದಾನೆ. ಮನೆಯೊಳಗಿಂದ ಆರ್ತನಾದ ಬಂದ ಕಾರಣ ನೆರೆ ಮನೆಯವರು ಬಾಗಿಲಿಗೆ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಬಲವಂತವಾಗಿ ಬಾಗಿಲು ತೆರೆಸಿದಾಗ ಆತ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ಶಂಕರನನ್ನು ಹಿಡಿದುಕೊಟ್ಟರು.
ಶಂಕರನ ಬಳಿ ಇದ್ದ ಮೂಗುತಿ, ಓಲೆಯನ್ನು ವಶಪಡಿಸಿಕೊಂಡಿರುವ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಂಕರ್ ಈ ಮೊದಲೂ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೆಬ್ಬಗೋಡಿ ಪಿಎಸ್ಸೈ ಶಶಿಧರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments