ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನಾಳೆ

Parashurama
Updated On : 26 Mar 2013, 12:34 pm

ಕನಕಪುರ: ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಹಾಗೂ ದನಗಳ ಜಾತ್ರೆ ಮಾ. 27 ರಿಂದ 31ರ ವರೆಗೆ ಐದು ದಿನಗಳ ಕಾಲ ಶ್ರೀವೀರಾಂಜನೇಯ ಗೆಳೆಯರ ಬಳಗ ಹಾಗೂ ಚಾಮುಂಡೇಶ್ವರಿ ಗೆಳೆಯರ ಬಳಗದ ಆಶ್ರಯದಲ್ಲಿ ನಡೆಯಲಿದೆ ಎಂದು ಮಾಜಿ ಜಿಪಂ ಸದಸ್ಯ ಭುಜಂಗಯ್ಯ ತಿಳಿಸಿದ್ದಾರೆ. ಅವರು ಇಲ್ಲಿನ ವೀರಾಂಜನೇಯ ದೇವಾಲಯದಲ್ಲಿ ಜಾತ್ರೆಯ ವಿವರಗಳನ್ನು ನೀಡುತ್ತಾ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಮಾ. 28 ರಂದು ಚಾಮುಂಡೇಶ್ವರಿ, ಆಂಜನೇಯ, ಅಣ್ಣಮ್ಮ ಮೊದಲಾದ ಒಂಬತ್ತು ಗ್ರಾಮ ದೇವತೆಗಳ ಪಲ್ಲಕಿ ಉತ್ಸವ ಸಾಮೂಹಿಕವಾಗಿ ನಡೆಯಲಿದೆ. ದನಗಳ ಪರಿಷೆಗೆ ಆಗಮಿಸುವ ರಾಸುಗಳಿಗೆ ಉತ್ತಮ ನೀರು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ, ಪಶುವೈದ್ಯಕೀಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ - 99024378682, 9448362578, 9972250244 ಸಂಪರ್ಕಿಸಲು ಮುಖಂಡ ಕೋಟೆಕುಮಾರ್ ಕೋರಿದರು. ಸಭೆಯಲ್ಲಿ ಮುಖಂಡರುಗಳಾದ ಸೋಮಶೇಖರ್, ನಾಗೇಶ್, ಪುಟ್ಟಸ್ವಾಮಿ, ಈರೇಗೌಡ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments