ಬಸ್ನಿಂದ ಬಿದ್ದು ಚಾಲಕ ಸಾವು
ಆನೇಕಲ್: ಚಲಿಸುತ್ತಿದ್ದ ಬಸ್ನಿಂದ ಇಳಿಯಲು ಹೋದ ಡ್ರೈವರ್ ಆಯ ತಪ್ಪಿ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅತ್ತಿಬೆಲೆ ಟಾಣಾ ವ್ಯಾಪ್ತಿಯ ನೆರಳೂರು ಗೇಟ್ಬಳಿ ನಡೆದಿದೆ. ಶಂಕರ್(25) ಮೃತಪಟ್ಟವ. ವೃತ್ತಿಯಲ್ಲಿ ಚಾಲಕನಾದ ಶಂಕರ್ ಚಂದಾಪುರದಲ್ಲಿ ಖಾಸಗಿ ಬಸ್ ಹತ್ತಿ ತನ್ನ ಗ್ರಾಮವಾದ ನೆರಳೂರಿನಲ್ಲಿ ಇಳಿಯಬೇಕಿತ್ತು. ಬಸ್ ನಿಲ್ಲುವ ಮುನ್ನವೇ ಇಳಿಯಲು ಹೋದ ಶಂಕರ್ ಬಿದ್ದು ತೀವ್ರ ಗಾಯಗಳಿಂದ ಮೃತರಾದರೆಂದು ಅತ್ತಿಬೆಲೆ ಪಿಎಸ್ಐ ವಿಜಯ್ ತಿಳಿಸಿದ್ದಾರೆ. ದೂರ ದಾಖಲಾಗಿದ್ದು ಬಸ್ ವಶಕ್ಕೆ ಪಡೆಯಲಾಗಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.