ಬಿಎಂಎಲ್ ಕೃಷ್ಣಪ್ಪ ಪುತ್ರ ಜಿಪಂ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ
ನೆಲಮಂಗಲ: ತಾಲೂಕು ಟಿ.ಬೇಗೂರು ಜಿಲ್ಲಾ ಪಂಚಾಯ್ತಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ತಂಡ ತಂಡವಾಗಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಚುನಾವಣಾ ನೀತಿಯಂತೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಕೇವಲ 5 ಮಂದಿಗೆ ಮಾತ್ರ ಅವಕಾಶ ನೀಡುವುದರಿಂದ ತಾಲೂಕು ಕಚೇರಿ ಮುಂಭಾಗ ಜೆ.ಡಿ.ಎಸ್ ಕಾರ್ಯಕರ್ತರ ಗುಂಪು ತುಂಬಿ ತುಳುಕುತ್ತಿತ್ತು.
ತಾಲೂಕಿನ ಜೆ.ಡಿ.ಎಸ್ನಲ್ಲಿ ಹಿರಿಯ ಮುಖಂಡರೆನಿಸಿದ್ದ 3 ಬಾರಿ ಜಿ.ಪಂ.ಸದಸ್ಯರಾಗಿದ್ದ ದಿವಂಗತ ಬಿಎಂಎಲ್ ಕೃಷ್ಣಪ್ಪ ಅವರ ಮಗ ಬಿ.ಎಂ.ಎಲ್.ಕಾಂತರಾಜು ಜೆಡಿಎಸ್ ಪಕ್ಷದದಿಂದ ಟಿ.ಬೇಗೂರು ಕ್ಷೇತ್ರಕ್ಕೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜೆ.ಡಿ.ಎಸ್. ಹಿರಿಯ ಮುಖಂಡ ಗಂಗಹನುಮಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಬಿ.ಡಿ.ಸಿ.ಸಿ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಡಾ.ಶ್ರೀನಿವಾಸಮೂರ್ತಿ ಸೇರಿದಂತೆ ನೂರಾರು ಜನ ಬೆಂಬಲಿಗರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.