ಬಿಎಂಎಲ್ ಕೃಷ್ಣಪ್ಪ ಪುತ್ರ ಜಿಪಂ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ
ನೆಲಮಂಗಲ: ತಾಲೂಕು ಟಿ.ಬೇಗೂರು ಜಿಲ್ಲಾ ಪಂಚಾಯ್ತಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ತಂಡ ತಂಡವಾಗಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಚುನಾವಣಾ ನೀತಿಯಂತೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಕೇವಲ 5 ಮಂದಿಗೆ ಮಾತ್ರ ಅವಕಾಶ ನೀಡುವುದರಿಂದ ತಾಲೂಕು ಕಚೇರಿ ಮುಂಭಾಗ ಜೆ.ಡಿ.ಎಸ್ ಕಾರ್ಯಕರ್ತರ ಗುಂಪು ತುಂಬಿ ತುಳುಕುತ್ತಿತ್ತು. ತಾಲೂಕಿನ ಜೆ.ಡಿ.ಎಸ್ನಲ್ಲಿ ಹಿರಿಯ ಮುಖಂಡರೆನಿಸಿದ್ದ 3 ಬಾರಿ ಜಿ.ಪಂ.ಸದಸ್ಯರಾಗಿದ್ದ ದಿವಂಗತ ಬಿಎಂಎಲ್ ಕೃಷ್ಣಪ್ಪ ಅವರ ಮಗ ಬಿ.ಎಂ.ಎಲ್.ಕಾಂತರಾಜು ಜೆಡಿಎಸ್ ಪಕ್ಷದದಿಂದ ಟಿ.ಬೇಗೂರು ಕ್ಷೇತ್ರಕ್ಕೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ. ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜೆ.ಡಿ.ಎಸ್. ಹಿರಿಯ ಮುಖಂಡ ಗಂಗಹನುಮಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಬಿ.ಡಿ.ಸಿ.ಸಿ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಡಾ.ಶ್ರೀನಿವಾಸಮೂರ್ತಿ ಸೇರಿದಂತೆ ನೂರಾರು ಜನ ಬೆಂಬಲಿಗರು ಇದ್ದರು.
ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ
ಮಾಗಡಿ: ಜನಸಾಗರದ ನಡುವೆ ಪುರಾಣ ಪ್ರಸಿದ್ಧ ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ತಹಸೀಲ್ದಾರ್ ಡಾ. ಹರೀಶ್ ನಾಯಕ್ ಭಕ್ತಿಭಾವದಿಂದ ಪ್ರಥಮವಾಗಿ ವಿಶೇಷ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು. ಗೋವಿಂದ.. ಗೋವಿಂದ..ಎಂಬ ನಾಮಸ್ಮರಣೆಯೊಂದಿಗೆ ಭಕ್ತಿಭಾವದಿಂದ ಭಕ್ತಜನಸಾಗರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಬಾಳೆಹಣ್ಣು ಧವನ ಎಸೆದರು. ಇದೇ ಸಂದರ್ಭದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿಗೆ ಹೇಮಾವತಿ ನೀರು ಹರಿಸುವ ಮಹತ್ಕಾರ್ಯಕ್ಕೆ ಅವಕಾಶ ಕಲ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು. ಮಾಜಿ ಧರ್ಮದರ್ಶಿ ಹಾಗು ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ, ಬಮೂಲ್ ನರಸಿಂಹಮೂರ್ತಿ, ಜಿ.ಪಂ. ಸದಸ್ಯೆ ಹಂಸಕುಮಾರಿ, ಮಾಜಿ ಸದಸ್ಯ ವೀರಪ್ಪ, ಸೋಮಶೇಖರ್ ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್, ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಎಚ್. ಸುರೇಶ್, ರವಿಕುಮಾರ್, ಮರೀಗೌಡ, ಕುದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಶಿವಪ್ರಸಾದ್, ದೇವೇಂದ್ರ, ರೆವಿನ್ಯೂ ಅಧಿಕಾರಿಗಳಾದ ಮಹಾಲಿಂಗಪ್ಪ, ವಿಜಯಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಅರ್ಚಕ ನರಸಿಂಹಭಟ್ಟ, ರಂಗನಾಥ್, ಭೋಜಣ್ಣ ಸೇರಿದಂತೆ ಸಹಸ್ರಾರು ಭಕ್ತಸಾಗರ ಭಕ್ತಿ ಸಮರ್ಪಿಸಿತು.
ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ
ರಾಮನಗರ: ರಾಮದೇವರ ಬೆಟ್ಟದ ಮೀಸಲು ಅರಣ್ಯ ಸುತ್ತಮುತ್ತ ಇರುವ ಕೃಷಿ ಭೂಮಿ ಕಬಳಿಕೆಗೆ ಮುಂದಾಗಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರೈತರ ಪರವಾದ ನಿಲುವು ಕೈಗೊಳ್ಳುವವರೆಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಸ್ವಾತಂತ್ರ ಪೂರ್ವ ಮತ್ತು ನಂತರದಲ್ಲಿ ಸರ್ಕಾರವು ರಾಮದೇವರ ಬೆಟ್ಟದ ಸುತ್ತಮುತ್ತ ಇದ್ದ ಕೃಷಿ ಭೂಮಿಯನ್ನು ಭೂರಹಿತ ರೈತರಿಗೆ ಮುಫತ್ತಾಗಿ ನೀಡಿದೆ. ಸದರಿ ರೈತರು ಭೂ ಹಕ್ಕುದಾರಿಕೆ ಹೊಂದಿದ್ದು, ಇದೀಗ ಅವರೆನ್ನಲ್ಲ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸದರಿ ಜಮೀನಿನ ಹಿಡುವಳಿದಾರರಿಗೆ ಸರ್ವೆ ಸ್ಕೆಚ್, ಆಕಾರಬಂದು, ಪೋಡಿ-ದುರಸ್ತು ಮಾಡಿಕೊಟ್ಟಿದ್ದು, ಪಹಣಿ ಮತ್ತು ಮ್ಯುಟೇಷನ್ ದಾಖಲೆಗಳಲ್ಲೂ ಹಕ್ಕುದಾರಿಕೆಯ ವಿವರ ಬರುತ್ತಿದೆ. 2 ತಿಂಗಳಿಂದ ಈಚೆಗೆ ಅರಣ್ಯ ಇಲಾಖೆ ಸದರಿ ಜಮೀನಿಗೆ ತಂತಿ ಬೇಲಿ ಹಾಕಿ, ವಶಪಡಿಸಿಕೊಳ್ಳುತ್ತಿದೆ ಎಂದು ದೂರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.