ಸಚಿವ ಬಚ್ಚೇಗೌಡರ ಬ್ಯಾಟಿಂಗ್...ಮಗನ ಬೌಲಿಂಗ್
ಸೂಲಿಬೆಲೆ: ಮಗ ಬೌಲಿಂಗ್ ಮಾಡಿದರೆ ಅಪ್ಪ ಬ್ಯಾಟ್ ಮೂಲಕ ಭರ್ಜರಿ ಹೊಡೆತ ನೀಡಿದ್ದನ್ನು ಕಂಡು ನೆರೆದ ಆಟಗಾರರು ಜೋರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಇಂಥ ಒಂದು ಸನ್ನಿವೇಶ ಒದಗಿ ಬಂದಿದ್ದು ವಿವೇಕಾನಂದ ಕ್ರಿಕೆಟ್ ಯೂತ್ ಕ್ಲ್ಲಬ್ ಉದ್ಘಾಟನೆ ವೇಳೆಯಲ್ಲಿ ಎಂಬುದು ವಿಶೇಷ.
ಸೂಲಿಬೆಲೆ ಪದವಿ ಕಾಲೇಜು ಆವರಣದಲ್ಲಿ ಸ್ಥಾಪನೆಯಾಗಿರುವ ವಿವೇಕಾನದ ಕ್ರಿಕೆಟ್ ಕ್ಲಬ್ ಉದ್ಘಾಟನೆ ಮಾಡಲು ಆಗಮಿಸಿದ್ದ ಸಚಿವರೊಂದಿಗೆ ಅವರ ಮಗ ಶರತ್ ಬಚ್ಚೇಗೌಡರು ಬಂದಿದ್ದರು. ಸಚಿವರು ಟೇಪ್ ಕತ್ತರಿಸಿ ಬ್ಯಾಟ್ ಹಿಡಿಯುತ್ತಿದ್ದಂತೆ 30 ಅಸುಪಾಸಿನ ಮಗ ಶರತ್ ಚೆಂಡು ಎಸೆಯಲು ನೆರೆದ ಆಟಗಾರರ ಮಧ್ಯೆಯೇ ಮುಂದಾದರು. ಸಚಿವರು ಆಟಗಾರರ ಚಪ್ಪಾಳೆ ಸದ್ದಿನಿಂದ ಮತ್ತೆ ಬ್ಯಾಟ್ ಕೈಗೆತ್ತಿಕೊಂಡು ಭರ್ಜರಿ ಹೊಡತೆಗಳನ್ನು ಬಾರಿಸಿದರು. 70 ವಯಸ್ಸಿನಲ್ಲಿ ಸಚಿವರ ಕ್ರೀಡಾ ಆಸಕ್ತಿ ಯುವಕರನ್ನು ನಾಚಿಸುವಂತಿತ್ತು. ಸಚಿವರ ಸಹೋದರ ಬಿ.ಎನ್. ಗೋಪಾಲಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ್ ರೆಡ್ಡಿ, ಗ್ರಾಪಂ ಅಧ್ಯಕ್ಷ ನಾರಾಯಣಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಸೇರಿದಂತೆ ಅಪಾರ ಕ್ರೀಡಾಪಟುಗಳು ಸಚಿವರ ಬ್ಯಾಟಿಂಗ್ ವೀಕ್ಷಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.